Posts

ಜವಾಬ್ದಾರಿ

*قال رسول الله ﷺ:*   _"مَا مِنْ عَبْدٍ يَسْتَرْعِيهِ اللَّهُ رَعِيَّةً، يَمُوتُ يَوْمَ يَمُوتُ وَهُوَ غَاشٌّ لِرَعِيَّتِهِ، إِلَّا حَرَّمَ اللَّهُ عَلَيْهِ الْجَنَّةَ"_   *[സഹീഹ് മുസ്ലിം: 142]*   *മലയാളം പരിഭാഷ:*   _"അല്ലാഹു ഏതൊരു അടിയനെ ഒരു ജനതയുടെ ഉത്തരവാദിത്തം ഏൽപ്പിച്ചിട്ട്, അവൻ മരിക്കുന്ന ദിവസം തന്റെ പ്രജകളോട് വഞ്ചന കാണിച്ച നിലയിലാണ് മരിക്കുന്നത് എങ്കിൽ, അല്ലാഹു അവന്ന് സ്വർഗ്ഗം ഹറാമാക്കിയിരിക്കുന്നു."_ ### *ഈ ഹദീസിന്റെ പൊരുൾ ഉസ്താദേ* *1. "റഇയ്യത്ത്" എന്നാൽ എന്ത്?*   *റഇയ്യത്ത് رعية* = ഉത്തരവാദിത്തം, പ്രജകൾ, ഭരണത്തിൻ കീഴിലുള്ളവർ.   ഇത് *രാജാവ് മാത്രമല്ല*. ഓരോരുത്തരും ഇടയന്മാരാണ്: ആര് ആരുടെ ഇടയൻ **ഭരണാധികാരി** രാജ്യത്തെ ജനങ്ങൾ **പിതാവ്** കുടുംബം, മക്കൾ **ഉസ്താദ്/ഇമാം** വിദ്യാർത്ഥികൾ, ജമാഅത്ത് **മുതലാളി** ജോലിക്കാർ **ഭർത്താവ്** ഭാര്യ _كُلُّكُمْ رَاعٍ وَكُلُّكُمْ مَسْئُولٌ عَنْ رَعِيَّتِهِ_ - *"നിങ്ങളെല്ലാം ഇടയന്മാരാണ്, എല്ലാവരും തന്റെ പ്രജകളെ കുറിച്ച് ചോദ്യം ചെയ്യപ്പെടും"* [ബുഖാരി, മുസ്ലിം] *2. "ഗാശ്ശ്" എന്ന വഞ്ചന എന്താണ്?*...

ಎಸ್ ಜೆ ಎಂ ಉಳ್ಳಾಲ ರೇಂಜ್ ವಾರ್ಷಿಕ ಕೌನ್ಸಿಲ್

Image
ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್  ಎಸ್ ಜೆ ಎಂ ಉಳ್ಳಾಲ ರೇಂಜ್ ವಾರ್ಷಿಕ ಕೌನ್ಸಿಲ್ ಆಝಾದ್ ನಗರದ ಅನ್ವಾರುಲ್ ಉಲೂಂ ಮದ್ರಸ ಆಡಿಟೋರಿಯಂ ನಲ್ಲಿ ನಡೆಯಿತು. ಎಸ್ಎಂಎಇಟಿ ಕಾರ್ಯದರ್ಶಿ ಬಶೀರ್ ಸಖಾಫಿ ಉಳ್ಳಾಲ ದುಆ ನೆರವೇರಿಸಿದರು. ರೇಂಜ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿದರು. Click here to watch a video of the Annual Council ರೇಂಜ್ ಸಹಾಯಕ ಕಾರ್ಯದರ್ಶಿ ಇರ್ಫಾನ್ ಸಅದಿ ಅಳೇಕಲ ಖಿರಾಅತ್ ಪಠಿಸಿದರು. ದಾರಂದಬಾಗಿಲು ಖತೀಬರಾದ ಹಸನ್ ಜಾಬಿರ್ ಫಾಳಿಲಿ ಮಾತನಾಡಿ ಎಸ್ ಜೆ ಎಂ ಉಳ್ಳಾಲ ರೇಂಜ್ ಈ ಒಂದು ವರ್ಷದ ಅವಧಿಯಲ್ಲಿ ಹಲವು ವೈವಿಧ್ಯ ಕಾರ್ಯ ಚಟುವಟಿಕೆಗಳನ್ನು ನಡೆಸಿದೆ, ವಿಶೇಷವಾಗಿ ಶ್ಲಾಘನೀಯವಾದ ಸಾಂತ್ವನ ಚಟುವಟಿಕೆಗಳು ನಡೆದಿದೆ ಎಂದು ತಿಳಿಸಿದರು. ಅವರು ಸಭೆಯನ್ನು ಉದ್ಘಾಟಿಸಿದರು. ಎಸ್ ಜೆ ಎಂ ಮೂಲಕ ವಿದ್ಯಾರ್ಥಿಗಳಿಗೆ,  ಮುಅಲ್ಲಿಮರುಗಳಿಗೆ, ಕಲಿಕೆಗೆ ಸಿಗುವ ಪ್ರಯೋಜನಗಳ ಕುರಿತು ರೇಂಜ್ ಅಧ್ಯಕ್ಷರಾದ ಜಲಾಲುದ್ದೀನ್ ಮದನಿ ಉಳ್ಳಾಲ ಸಭೆಗೆ ಮನವರಿಕೆ ಮಾಡಿದರು.  ಅವರು ಸಭೆಯ ಅಧ್ಯಕ್ಷತೆ ವಹಿಸಿದರು. ಪ್ರಸ್ತುತ ಸಭೆಯಲ್ಲಿ ಕುಟುಂಬ ಸಮೇತ ಪವಿತ್ರ ಹಜ್ ಯಾತ್ರೆ ಹೊರಡುತ್ತಿರುವ ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್ ಮತ್ತು ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷರಾದ ಬಿ ಜಿ ಹನೀಫ್ ಹಾಜಿ ಉಳ್ಳಾಲ ಇವರನ್ನು ಗೌರವಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ಬೀ...

ಪವಿತ್ರ ಹಜ್ ಯಾತ್ರೆ ಹೊರಡುತ್ತಿರುವ ಪಿ ಎಂ ಮದನಿ ಉಸ್ತಾದರಿಗೆ ಬೀಳ್ಕೊಡುಗೆ.

Image
ಸುನ್ನತ್ ಜಮಾಅತಿನ ಪ್ರಮುಖ ಸಂಘಟನೆಯಾದ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್ ಜೆ ಎಂ ) ನ ತಳ ಮಟ್ಟದಿಂದ ರಾಜ್ಯ ಮಟ್ಟದವರೆಗೆ ತನ್ನ ಕಾರ್ಯ ಚಟುವಟಿಕೆಯ ಮೂಲಕ ಬೆಳೆದು ಬಂದ ಎಸ್ ಜೆ ಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ಎಂ ಮದನಿ ಪೂಡಲ್ ರವರು ಈ ವರ್ಷದ ಪವಿತ್ರ ಹಜ್ ಯಾತ್ರೆಗೆ ಹೊರಟಿರುತ್ತಾರೆ. ಇವರಿಗೆ ಎಸ್ ಜೆ ಎಂ ದ.ಕ ವೆಸ್ಟ್ ಜಿಲ್ಲಾ ವತಿಯಿಂದ ಪಡೀಲ್ ಇಲ್ಮ್ ಸೆಂಟರಿನಲ್ಲಿ  ಶುಭ ಹಾರೈಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವೆಸ್ಟ್ ಜಿಲ್ಲಾಧ್ಯಕ್ಷರಾದ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಖಾಫಿ, ಎಸ್ ಎಂ ಎ ವೆಸ್ಟ್ ಜಿಲ್ಲಾಧ್ಯಕ್ಷರಾದ ಹನೀಫ್ ಸಅದಿ ಮತ್ತು ಜಿಲ್ಲಾ ನಾಯಕರು, ರೇಂಜ್ ನಾಯಕರು ಉಪಸ್ಥಿತರಿದ್ದರು.

ಸಮುದಾಯ ಜಾಗ್ರತಿ ಅಭಿಯಾನ ಇದರ ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭ ಮತ್ತು ಬ್ರಹತ್ ಲೀಡರ್ಸ್ ಮೀಟ್ ಇದರ ಪೂರ್ವಭಾವಿ ಸಭೆ

Image
ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ವತಿಯಿಂದ ಎಪ್ರಿಲ್ 22 ಬುಧವಾರ ಮಂಗಳೂರು ಟೌನ್ ಹಾಲಿನಲ್ಲಿ  ನಡೆಯಲಿರುವ ಜಿಲ್ಲೆಯ 600 ಕ್ಕೂ ಹೆಚ್ಚು ಮೊಹಲ್ಲಾದ ಬ್ರಹತ್ ಲೀಡರ್ಸ್ ಮೀಟ್ ಇದರ ಪೂರ್ವಭಾವಿ ಸಭೆ ಮತ್ತು ಎಪ್ರಿಲ್ 14 ರಿಂದ ಜೂನ್ 30 ರವರೆಗೆ ಖೈರು ಉಮ್ಮ ಎಂಬ ಶೀರ್ಷಿಕೆಯಡಿ ಸುನ್ನೀ ಮ್ಯಾನೇಜ್ಮೆಂಟ್ ಎಸೋಸಿಯೇಶನ್ ರಾಜ್ಯ ಮತ್ತು ಅಧೀನ ಘಟಕಗಳ ವತಿಯಿಂದ  ನಡೆಯಲಿರುವ ಸಮುದಾಯ ಜಾಗ್ರತಿ ಅಭಿಯಾನ ಇದರ ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭ ಪಡೀಲ್ ಇಲ್ಮ್ ಸೆಂಟರಿನಲ್ಲಿ ನಡೆಯಿತು. ಪುಂಡೂರು ಇಬ್ರಾಹಿಂ ಸಖಾಫಿ ದುಆ ನೆರವೇರಿಸಿದರು. ಎಸ್ ಜೆ ಎಂ ರಾಜ್ಯಾಧ್ಯಕ್ಷರಾದ ಜೆಪ್ಪು ಅಬ್ದುಲ್ ರಹ್ಮಾನ್ ಮದನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಎಪ್ರಿಲ್ 22 ರಂದು ನಡೆಯಲಿರುವ ಬ್ರಹತ್ ಲೀಡರ್ಸ್ ಮೀಟ್ ಮತ್ತು ಸುನ್ನೀ ಮ್ಯಾನೇಜ್ಮೆಂಟ್ ಎಸೋಸಿಯೇಶನ್ ರಾಜ್ಯ ಮತ್ತು ಅಧೀನ ಘಟಕಗಳ ವತಿಯಿಂದ ಸಮುದಾಯ ಜಾಗೃತಿ ಅಭಿಯಾನದ ಅಂಗವಾಗಿ ನಿಗದಿತ ದಿನಾಂಕಗಳಲ್ಲಿ ನಡೆಸಲ್ಪಡುವ ಕಮ್ಯೂನಿಟಿ ಟಾಕ್,  ಸಮುದಾಯದ ಸ್ಥಿತಿಗತಿಗಳ ಬಗ್ಗೆ ಅವಲೋಕಿಸುವ ಕಮ್ಯೂನಿಟಿ ಡಿಬೇಟ್, ಕಮ್ಯೂನಿಟಿ ಕಾಂಫರೆನ್ಸ್ ಮತ್ತು ಸಮಾರೋಪ ಸಮಾರಂಭ ಯಶಸ್ವಿಗೊಳಿಸಲು ಕರೆ ನೀಡಿದರು. ಎಸ್ ಎಂ ಎ ರಾಜ್ಯ ಉಪಾಧ್ಯಕ್ಷರಾದ ಹಮೀದ್ ಹಾಜಿ ಕೊಡುಂಗಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ಸಮುದಾಯ ಜಾಗ್ರತಿ ಅಭಿಯಾನದ ಉದ್ಘಾಟನಾ ಸಮಾರಂಭದ ಪೋ...

ಬದ್ರುಲ್ ಹುದಾ ಹೈಯರ್ ಸೆಕೆಂಡರಿ ಮದ್ರಸ ಇರಾ ಮೂಲೆ ಮದ್ರಸ ಫತ್ಹೇ ಮುಬಾರಕ್

Image
ಇರಾ:ಕರ್ನಾಟಕದ್ಯಂತ ಮದ್ರಸಾಗಳಲ್ಲಿ ಜರುಗಿರುವ ಫತ್ಹೇ ಮುಬಾರಕ್ ಬದ್ರುಲ್ ಹುದಾ ಹೈಯರ್ ಸೆಕೆಂಡರಿ ಮದ್ರಸ ಇರಾ ಮೂಲೆಯಲ್ಲಿಯೂ ಅತೀ ಪ್ರೌಢವಾಗಿ 29/03/26 ಭಾನುವಾರದಂದು ನಡೆಯಿತು.  ಜಮಾಅತ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿಯವರ ಅಧ್ಯಕ್ಷತೆಯಲ್ಲಿ ಜರುಗಿತು.  ಬದ್ರ್ ಶುಹದಾಗಳನ್ನು ಸ್ಮರಿಸಿ  ದುಆ ಕ್ಕೆ ನೇತೃತ್ವ ನೀಡಿದ ಖತೀಬ್ ಉಸ್ತಾದ್ ಯಾಕೂಬ್ ಲತೀಫಿ ಸಭೆಯನ್ನು ಉದ್ಘಾಟನೆ ನಿರ್ವಹಿಸಿ,ಇಲ್ಮಿನ ಶ್ರೇಷ್ಠತೆ, ಪ್ರಾಧಾನ್ಯತೆಯ ಬಗ್ಗೆ ಅರಿವು ಮೂಡಿಸಿದರು.  ನಂತರ ಮಾತಾಡಿದ ಸದರ್ ಉಸ್ತಾದ್ ಝೈನುಲ್ ಆಬಿದ್ ನಈಮಿ ಮದ್ರಸಾ ನಿಯಮಾವಳಿಗಳನ್ನು  ರಕ್ಷಕರಿಗೂ ಮಕ್ಕಳಿಗೂ ಜಾಗೃತಿ ಮೂಡಿಸಿದರು. ಜೊತೆಗೆ ಸ್ವಾಗತ ಭಾಷಣದಲ್ಲಿ ಮಾತಾಡಿದ ಮುಅಲ್ಲಿಂ ನುಅ್-ಮಾನ್ ಸಅದಿ ಉಸ್ತಾದ್ ಮದ್ರಸಾದ ಅವಶ್ಯಕತೆ ಬಗ್ಗೆ ಮಾತಾಡಿದರು. ವೇದಿಕೆಯಲ್ಲಿದ್ದ ಜಮಾಅತ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಖಾಫಿ ಮತ್ತು ದಫ್ ಉಸ್ತಾದ್ ವೇದಿಕೆ ಗೆ ಶುಭ ಹಾರೈಸಿದರು. ನಾಡಿನ ಗಣ್ಯಾತೀತ ವ್ಯಕ್ತಿಗಳು ರಕ್ಷಕರು ಸಭೆಯಲ್ಲಿದ್ದರು.ಮದ್ರಸಕ್ಕೆ ಹೊಸದಾಗಿ ಸೇರಿದ ಮಕ್ಕಳಿಗೆ ಕೈಯಲ್ಲಿ ಅಲಿಫ್ ಅಕ್ಷರ ಬರೆಸಿ.ಕಿತಾಬ್ ವಿತರಿಸಿ, ಸಿಹಿ ತಿಂಡಿಗಳನ್ನು ಹಂಚಿ ಮೂರು ಸ್ವಲಾತ್ನೊಂದಿಗೆ ಸಭೆ ಕೊನೆಗೊಳಿಸಿತು

ಫತ್ಹೇ ಮುಬಾರಕ್ ನೊಂದಿಗೆ ಅಕ್ಷರ ಲೋಕಕ್ಕೆ ಗ್ರ್ಯಾಂಡ್ ಎಂಟ್ರಿ

Image
✍️ ಸಬಾಹ್ ಸಖಾಫಿ ಅಲ್ ಹಿಮಮಿ (ಪ್ರ. ಕಾರ್ಯದರ್ಶಿ, SJM ಪಾಲಿಬೆಟ್ಟ ರೇಂಜ್) ಮದ್ರಸಾ, ಅಕ್ಷರ ಲೋಕದ ಮೊದಲ ಹೆಜ್ಜೆ. ಓರ್ವ ವಿದ್ಯಾರ್ಥಿಯ ಧಾರ್ಮಿಕ ವಿದ್ಯಾರ್ಜನೆಯ ಅಧಿಕೃತ ಚಾಲನೆ ಮದ್ರಸಾ ವಿದ್ಯಾಭ್ಯಾಸದೊಂದಿಗೆಯಾಗಿದೆ. ಅಧಿಕೃತಕ್ಕಿಂತ ಮೊದಲೇ ವಿದ್ಯಾರ್ಜನೆಗೈಯ್ಯಬೇಕು‌. Mother is the first and best teacher ಎಂಬಂತೆ ತಾಯಿ(ತಂದೆ) ತನ್ನ ಮಗುವಿಗೆ ಅವನ(ಳ) ಬುದ್ಧಿ ಸಾಮರ್ಥ್ಯಕ್ಕೆ ತಕ್ಕಂತೆ ವಿದ್ಯೆ ಹೇಳಿಕೊಡಬೇಕು. ತೊಟ್ಟಿಲ್ ಮುದಲ್ ಕಟ್ಟಿಲ್ ವರೇ ಎಂಬ ಮಲಯಾಳಿ ವಾಕ್ಯ ಇಲ್ಲಿಗೆ ಸೂಕ್ತ. ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಅಧೀನದ 10,000+ ಮದ್ರಸಾಗಳಲ್ಲಿ 2026-27ನೇ ಸಾಲಿನ ಅಧ್ಯಯನ ವರ್ಷ ಮಾರ್ಚ್ 29 ಫತ್ಹೇ ಮುಬಾರಕ್ ನೊಂದಿಗೆ ರಾಜ್ಯ-ರಾಷ್ಟ್ರದಾದ್ಯಂತ ನಡೆಯಲಿದೆ. ಈ ವಿದ್ಯಾಭ್ಯಾಸ ಚಳವಳಿಗೆ ನೇತೃತ್ವ ನೀಡಿದ ಮಹಾನ್ ನಾಯಕ ನೂರುಲ್ ಉಲಮಾ ಎಂ.ಎ ಉಸ್ತಾದ್. ಅಲ್ಲಾಹು ಅವರ ದರಜ ಉನ್ನತಿಗೇರಿಸಲಿ, ಆಮೀನ್. ಅವರ ಅಂದಿನ ದೂರದೃಷ್ಟಿಯ ಫಲವನ್ನು ನಾವು ಈಗ ಸಂತಸದಿಂದ ಅನುಭವಿಸುತ್ತಿದ್ದೇವೆ. ಸಮಕಾಲೀನ ಸನ್ನಿವೇಶದಲ್ಲಿ ಜಗತ್ತಿನಾದ್ಯಂತ ಇಷ್ಟು ಸಿಸ್ಟಮ್ಯಾಟಿಕ್ ಆಗಿ ನಡೆಯುವ ಮತ್ತೊಂದು ಸಂಸ್ಥೆ(ಬೋರ್ಡ್) ಸರಕಾರಕ್ಕೂ ತೋರಿಸಲು ಸಾಧ್ಯವಿಲ್ಲ. ಮದ್ರಸಾ ಸಿಲಬಸ್, ಪಠ್ಯ ಪುಸ್ತಕ, ಕ್ಲಾಸ್ ರೂಂ ನಿರ್ವಹಣೆ, ಸ್ಮಾರ್ಟ್ ಕ್ಲಾಸ್, ಪ್ರಾಕ್ಟಿಕಲ್ ಕ್ಲಾಸ್, ತರಗತಿ ವಿಂಗಡನೆ, ಜನರಲ್ ಮತ್ತು ಪಬ್ಲಿಕ್ ಪರೀಕ್ಷೆಗಳು, ಸ್ಕಾಲರ್ಶ...

ರಂಝಾನ್ ಕಿಟ್ ವಿತರಣೆ ಹಾಗು ಜಲ್ಸತುಲ್ ವಿದಾ

Image
ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಉಳ್ಳಾಲ ರೇಂಜ್ ನೇತ್ರತ್ವದಲ್ಲಿ ಉಳ್ಳಾಲ ಮುಅಲ್ಲಿಂ ಒಕ್ಕೂಟ ಇದರ ಸಹಯೋಗದೊಂದಿಗೆ ರಂಝಾನ್ ಕಿಟ್ ವಿತರಣೆ ಹಾಗು ಜಲ್ಸತುಲ್ ವಿದಾ ಉಳ್ಳಾಲ ಆಝಾದ್ ನಗರದ ಅನ್ವಾರುಲ್ ಉಲೂಂ ಮದ್ರಸ ಆಡಿಟೋರಿಯಂ ನಲ್ಲಿ ನಡೆಯಿತು. ಸಭೆಯ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಉಳ್ಳಾಲದ ಹಿರಿಯ ವಿದ್ವಾಂಸರಾದ ಅಬೂ ಝಿಯಾದ್ ಮದನಿ ಪಟ್ಟಾಂಬಿ ಉಸ್ತಾದ್ ದುಆ ನೆರವೇರಿಸಿದರು. ಎಸ್ ಜೆ ಎಂ ಉಳ್ಳಾಲ ರೇಂಜ್ ಅಧ್ಯಕ್ಷರಾದ ಜಲಾಲುದ್ದೀನ್ ಮದನಿ ಮಾತನಾಡಿ ಉಳ್ಳಾಲ ವ್ಯಾಪ್ತಿಯ ಮದ್ರಸ ಮಸೀದಿಗಳ ಸುಮಾರು 160 ಕ್ಕೂ ಮಿಕ್ಕ ಉಸ್ತಾದರುಗಳಿಗೆ ಈ ವರ್ಷ ರಂಝಾನ್ ಕಿಟ್ ನೀಡಲಾಗುತ್ತಿದ್ದು, ಇದಕ್ಕೆ ಹಲವು ಉದಾರ ದಾನಿಗಳು ಸಹಾಯ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು. ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಂಝಾನ್ ಕಿಟ್ ವೀಡಿಯೋ ನಿರ್ವಹಣಾ ಸಮಿತಿ ಚೇರ್ಮಾನ್ ಶರೀಫ್ ಸಅದಿ ಕಲ್ಲಾಪು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷರಾದ ಬಿ ಜಿ ಹನೀಫ್ ಹಾಜಿ ಮತ್ತು ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಕಾಮಿಲ್ ಸಖಾಫಿ ಉಳ್ಳಾಲ, ನಿರ್ವಹಣಾ ಸಮಿತಿ ಕೋಶಾಧಿಕಾರಿ ವಿ ಕೆ ಅಬ್ದುರ್ರಹ್ಮಾನ್ ಸಖಾಫಿ ಮುಕ್ಕಚೇರಿ, ಟೃಸ್ಟ್ ಕಾರ್ಯದರ್ಶಿ ಬಶೀರ್ ಸಖಾಫಿ ಉಳ್ಳಾಲ, ಇಬ್ರಾಹಿಂ ಅಹ್ಸನಿ ಮಂಜನಾಡಿ, ಪಿ ಎಸ್ ಮುಹ...