Posts

Showing posts from October, 2025

ಅಕ್ಟೋಬರ್ 18,19,20 ಸುರಿಬೈಲ್ ಉಸ್ತಾದ್ ಆಂಡ್ ನೇರ್ಚೆ : ಯಶಸ್ವಿ ಗೊಳಿಸಲು ಎಸ್ ಜೆ ಎಂ ದ.ಕ. ಸೌತ್ ಜಿಲ್ಲಾ ಸಮಿತಿ ಕರೆ

Image
ವಿಟ್ಲ:  ಅಕ್ಟೋಬರ್ 18,19,20 ರಂದು ನಡೆಯುವ ಜಿಲ್ಲೆಯ ಪ್ರಸಿದ್ಧ ವಿದ್ಯಾಸಂಸ್ಥೆ ದಾರುಲ್ ಅಶ್ ಅರಿಯ್ಯ ಸ್ಥಾಪಕ ಸೂಫಿವರ್ಯ ಮರ್ಹೂಂ ಸುರಿಬೈಲ್ ಉಸ್ತಾದರ   24ನೇ ಆಂಡ್ ನೇರ್ಚೆ ಯಶಸ್ವಿ ಗೊಳಿಸುವಂತೆ ಎಸ್ ಜೆ ಎಂ ದ.ಕ.ಸೌತ್ ಜಿಲ್ಲಾ ಸಮಿತಿ ಕರೆ ನೀಡಿದೆ. ಇತ್ತೀಚೆಗೆ ಕುಡ್ತಮುಗೇರು ಬದ್ರುಲ್ ಹುದಾ ಸೆಕೆಂಡರಿ ಮದ್ರಸದಲ್ಲಿ ಜಿಲ್ಲಾಧ್ಯಕ್ಷ ಯಅಖೂಬ್ ಲತೀಫಿಯವರ ಅಧ್ಯಕ್ಷತೆಯಲ್ಲಿ ಸೇರಿದ ಕಾರ್ಯಕಾರಿಣಿ ಸಭೆಯಲ್ಲಿ  ಅಶ್ ಅರಿಯ್ಯ ಮೆನೇಜರ್ ಮುಹಮ್ಮದ್ ಅಲಿ ಸಖಾಫಿ ಸಂದೇಶ ನೀಡಿದರು. ಕಾರ್ಯದರ್ಶಿ ಸಿದ್ದೀಖ್ ಸಅದಿ ಸ್ವಾಗತಿಸಿದರು..  ಕೋಶಾಧಿಕಾರಿ ಅಕ್ಬರ್ ಅಲಿ ಮದನಿ ಸೇರಿದಂತೆ ಜಿಲ್ಲಾ ನಾಯಕರು ಭಾಗವಹಿಸಿದ್ದರು.ರಝ್ಝಾಖ್ ಸಖಾಫಿ ಕೊಳಕೆ ಧನ್ಯವಾದ ಸಲ್ಲಿಸಿದರು

ಸಮಸ್ತ ಸೆಂಟಿನರಿ ಸಂಭ್ರಮದ ಅಂಗವಾಗಿ ನಡೆದ ದ.ಕ.ಜಿಲ್ಲಾ ಮುಅಲ್ಲಿಂ ಸಮ್ಮೇಳನ

Image
ಸಮಸ್ತ ಸೆಂಟಿನರಿ ಅಂಗವಾಗಿ ನಡೆಯುವ ಜಿಲ್ಲಾ ಮುಅಲ್ಲಿಂ ಸಮ್ಮೇಳನದ ಕರ್ನಾಟಕ ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭವು ದ.ಕ.ಜಿಲ್ಲಾ ಈಸ್ಟ್,ವೆಸ್ಟ್,ಸೌತ್ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಪುರಭವನದಲ್ಲಿ ನಡೆಯಿತು. ಮುಅಲ್ಲಿಮ್ ಸಮ್ಮೇಳನದ 1 ನೇ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಎಸ್.ಜೆ.ಎಂ.ಕರ್ನಾಟಕ ರಾಜ್ಯಾಧ್ಯಕ್ಷ ಜೆಪ್ಪು ಅಬ್ದುರ್ರಹ್ಮಾನ್ ಮದನಿ ಸಭಾಧ್ಯಕ್ಷತೆ ವಹಿಸಿದರು.ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ತೆನ್ನಲ ಅಬೂಹನೀಫಲ್ ಫೈಝಿ ಸಭೆಯನ್ನು ಉದ್ಘಾಟಿಸಿದರು. ಅಮೀನುಶ್ಶರೀಅ ಸಯ್ಯಿದ್ ಅಲೀ ಬಾಫಖೀ ತಂಙಳ್ ಪ್ರಾರ್ಥನೆಗೆ ನೇತೃತ್ವ ನೀಡಿದರು. ವಿ.ಪಿ.ಎಂ.ಫೈಝಿ ವಿಲ್ಯಾಪಳ್ಳಿ, ವಿದ್ಯಾಭ್ಯಾಸ ಬೋರ್ಡ್ ಕಾರ್ಯದರ್ಶಿ ಪ್ರೊಫೆಸರ್ ಎ.ಕೆ. ಅಬ್ದುಲ್ ಹಮೀದ್ ಸಾಹಿಬ್, ಸಿ.ಪಿ.ಸೈದಲವಿ ಮಾಸ್ಟರ್ ಚೆಂಙ್ಙರ, ಉಮರ್ ಮದನಿ ಪಾಲಕ್ಕಾಡ್, ಎಸ್.ಎಂ.ಎ. ರಾಜ್ಯ ಉಪಾಧ್ಯಕ್ಷ ಕೊಡುಂಗಾಯಿ ಅಬ್ದುಲ್ ಹಮೀದ್ ಹಾಜಿ ಮಾತನಾಡಿದರು. ಮುಅಲ್ಲಿಮ್ ಸಮ್ಮೇಳನದ 2 ನೇ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಇದೇ ಸಂದರ್ಭದಲ್ಲಿ ಸಮಸ್ತ ಉಪಾಧ್ಯಕ್ಷ ಹಾಗೂ ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಕೋಶಾಧಿಕಾರಿ ಖುದ್ವತುಸ್ಸಾದಾತ್ ಅಸ್ಸಯ್ಯಿದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್, ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷರೂ ಉಡುಪಿ, ಚಿಕ್ಕಮಂಗಳೂರು ಸಂಯುಕ್ತ ಜಮಾಅತ್ ಖಾಝಿಯೂ ದಾರುಲ್ ಇರ್...

ಎಸ್ ಜೆ ಎಂ ಮುಅಲ್ಲಿಂ ಜಿಲ್ಲಾ ಸಮ್ಮೇಳನ, ರಾಜ್ಯ ಮಟ್ಟದ ಉದ್ಘಾಟನೆ ಇದರ ಸಿದ್ಧತಾ ಸಭೆ

Image
 ಮುಅಲ್ಲಿಂ ಜಿಲ್ಲಾ ಸಮ್ಮೇಳನ ನಿರ್ವಹಣಾ ಸಮಿತಿಯ  ಸಿದ್ಧತಾ ಸಭೆಯು ಪಡೀಲ್ ಇಲ್ಮ್ ಸೆಂಟರಿನಲ್ಲಿ ನಡೆಯಿತು. ಎಸ್ ಜೆ ಎಂ ರಾಜ್ಯ ಉಪಾಧ್ಯಕ್ಷ ಕೆ ಕೆ ಎಂ ಕಾಮಿಲ್ ಸಖಾಫಿ ದುಆ ನೆರವೇರಿಸಿದರು. ನಿರ್ವಹಣಾ ಸಮಿತಿ ಚೀಫ್ ಕನ್ವೀನರ್ ಯಾಕೂಬ್ ಲತೀಫಿ ಸ್ವಾಗತಿಸಿದರು. ಎಸ್ ಜೆ ಎಂ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ವಹಣಾ ಸಮಿತಿ ಚೇಯರ್ ಮಾನ್ ಅಬ್ದುಲ್ ಹಮೀದ್ ಸಅದಿ ಮೂರುಗೋಳಿಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಅಲ್ಲಿಂ ಸಮ್ಮೇಳನಕ್ಕೆ ಅಂತಿಮ ರೂಪುರೇಷೆ ನೀಡಲಾಯಿತು. ಸಮಸ್ತ ಕೇರಳ ಸುನ್ನೀ ಜಂಇಯ್ಯತುಲ್ ಉಲಮಾ ಇದರ ನೂರನೇ ವಾರ್ಷಿಕದ ಪ್ರಯುಕ್ತ ಎಸ್ ಜೆ ಎಂ ದ.ಕ ಜಿಲ್ಲಾ ವೆಸ್ಟ್, ಈಸ್ಟ್,  ಸೌತ್ ವತಿಯಿಂದ ಜಿಲ್ಲಾ ಮುಅಲ್ಲಿಂ ಸಮ್ಮೇಳನ ಮತ್ತು ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭವು ಮಂಗಳೂರಿನ ಪುರಭವನದಲ್ಲಿ ಅಕ್ಟೋಬರ್ 14 ರಂದು ನಡೆಯಲಿದೆ. ದ.ಕ ವೆಸ್ಟ್, ಈಸ್ಟ್ ಮತ್ತು ಸೌತ್ ಜಿಲ್ಲಾ ಅಧೀನದ  ಮದ್ರಸಗಳ ಸರಿಸುಮಾರು 1500 ಮುಅಲ್ಲಿಮರು ಭಾಗವಹಿಸಲಿದ್ದಾರೆ. ಎಸ್ ಜೆ ಎಂ ರಾಜ್ಯಾಧ್ಯಕ್ಷರಾದ ಜೆಪ್ಪು ಅಬ್ದುಲ್ ರಹ್ಮಾನ್ ಮದನಿ ಅಧ್ಯಕ್ಷತೆ ವಹಿಸಲಿರುವರು. ಎಸ್ ಜೆ ಎಂ ಕೇಂದ್ರೀಯ ಸಮಿತಿ ಅಧ್ಯಕ್ಷರಾದ ಅಮೀನುಶ್ಶರೀಅಃ ಸಯ್ಯಿದ್ ಬಾಫಖಿ ತಂಙಳ್ ದುಆ ಮಾಡಲಿರುವರು. ಎಸ್.ಜೆ. ಎಂ ಕೇಂದ್ರ ಸಮಿತಿ ಪ...