ಬದ್ರಿಯಾ ಮದ್ರಸ ಕ್ರಷ್ಣಾಪುರ ನಾಲ್ಕನೇ ಬ್ಲಾಕ್ ಮದ್ರಸ ವಿದ್ಯಾರ್ಥಿನಿಯ ವಿಶೇಷ ಸಾಧನೆ
ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ದೇಶ ವಿದೇಶಗಳಲ್ಲಿ ಏಕ ಕಾಲದಲ್ಲಿ ನಡೆಸಿದ ಸ್ಮಾರ್ಟ್ ಸ್ಕಾಲರ್ಶಿಪ್ ಮುಖ್ಯ ಪರೀಕ್ಷೆಯಲ್ಲಿ ಸುರತ್ಕಲ್ ರೇಂಜಿನ ಕ್ರಷ್ಣಾಪುರ ನಾಲ್ಕನೇ ಬ್ಲಾಕ್ ಬದ್ರಿಯಾ ಮದ್ರಸದ 8 ನೇ ತರಗತಿಯ ವಿದ್ಯಾರ್ಥಿನಿ ಫಾತಿಮ ಹಾದಿಯಃ ರಾಜ್ಯ ಮಟ್ಟದಲ್ಲಿ ತೃತೀಯ ರ್ಯಾಂಕ್ ಪಡೆದು ಚಿನ್ನದ ನಾಣ್ಯ ತನ್ನದಾಗಿಸಿರುವಳು. ಇವಳು ಯಾಕೂಬ್ ಹುಸೈನ್ ಹಾಗೂ ಸಕೀನ ದಂಪತಿಯ ಪುತ್ರಿಯಾಗಿದ್ದಾಳೆ.