ಎಸ್ ಜೆ ಎಂ ದ.ಕ ವೆಸ್ಟ್ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸಭೆ
ಎಸ್ ಜೆ ಎಂ ದ.ಕ ಜಿಲ್ಲಾ ವೆಸ್ಟ್ ಕಾರ್ಯಕಾರಿಣಿ ಸಮಿತಿ ಸಭೆ ಪಡೀಲ್ ಇಲ್ಮ್ ಸೆಂಟರಿನಲ್ಲಿ ನಡೆಯಿತು.
ಅಬ್ದುಲ್ ಅಝೀಝ್ ನೂರಾನಿ ಸಭೆಯನ್ನು ಉದ್ಘಾಟಿಸಿದರು.
ವೆಸ್ಟ್ ಜಿಲ್ಲಾಧ್ಯಕ್ಷರಾದ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ಮಾತನಾಡಿ ದ.ಕ ವೆಸ್ಟ್ ಜಿಲ್ಲೆಯ ಅಧೀನ ರೇಂಜುಗಳ ಪ್ರತೀ ಮದ್ರಸಗಳಲ್ಲಿ ಮುಂದಿನ ಕಾರ್ಯ ಚಟುವಟಿಕೆಗಳು ಸುಸೂತ್ರವಾಗಿ ನಡೆಸಬೇಕು ಎಂದು ತಿಳಿಸಿದರು. ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
ಹಬೀಬ್ ಸಖಾಫಿ ಸುರತ್ಕಲ್ ಇವರಿಗೆ ದ.ಕ ವೆಸ್ಟ್ ಜಿಲ್ಲೆಯ ವತಿಯಿಂದ ಸನ್ಮಾನ.
ಇತ್ತೀಚೆಗೆ ನಡೆದ ಎಸ್ ಜೆ ಎಂ ರಾಜ್ಯ ಮಟ್ಟದ ಮುಅಲ್ಲಿಂ ಮೆಹರ್ಜಾನ್ ಇದರ ಹೈ ಝೋನ್ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಆಗಿ ಹೊರ ಹೊಮ್ಮಿದ ದ.ಕ ವೆಸ್ಟ್ ಜಿಲ್ಲೆಯ ಸುರತ್ಕಲ್ ರೇಂಜಿನ ಹಬೀಬ್ ಸಖಾಫಿ ಸುರತ್ಕಲ್ ಇವರನ್ನು ಜಿಲ್ಲಾ ನಾಯಕರ ನೇತ್ರತ್ವದಲ್ಲಿ ಸ್ಮರಣಿಕೆ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.
ಸಮಸ್ತ 100 ನೇ ವಾರ್ಷಿಕ ಪ್ರಯುಕ್ತ ಜಿಲ್ಲಾ ಮುಅಲ್ಲಿಂ ಸಮ್ಮೇಳನಕ್ಕೆ ಅತೀ ಹೆಚ್ಚು ಮೊತ್ತವನ್ನು ಸಂಗ್ರಹಿಸಿ ನೀಡಿ ಸಹಕರಿಸಿದ SJM ಉಳ್ಳಾಲ ರೇಂಜ್ ಸಮಿತಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಸಭೆಯಲ್ಲಿ ವೆಸ್ಟ್ ಜಿಲ್ಲಾ ನಾಯಕರು ಸಮಿತಿ ಸದಸ್ಯರು ಉಪಸ್ಥಿತರಿದ್ದರು.
Comments
Post a Comment