ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ( ಎಸ್ ಜೆ ಎಂ ) ದ.ಕ ಜಿಲ್ಲಾ ವೆಸ್ಟ್ ಮಹಾಸಭೆ. ನೂತನ ಪದಾಧಿಕಾರಿಗಳ ಆಯ್ಕೆ
ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ದ.ಕ ಜಿಲ್ಲಾ ವೆಸ್ಟ್ ಇದರ ಮಹಾಸಭೆಯು ಪಡೀಲ್ ಇಲ್ಮ್ ಸೆಂಟರಿನಲ್ಲಿ ನಡೆಯಿತು.
ಸಯ್ಯಿದ್ ಸಾಬಿತ್ ಸಖಾಫಿ ಪಾಟ್ರಕೋಡಿ ದುಆ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಶಾಫಿ ಮದನಿ ಕರಾಯ ಸ್ವಾಗತಿಸಿದರು. ಎಸ್ ಜೆ ಎಂ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ಸಭೆಯನ್ನು ಉದ್ಘಾಟಿಸಿ, ಮಾತನಾಡಿ ಎಸ್ ಜೆ ಎಂ ಇದರ ಕಾರ್ಯ ಚಟುವಟಿಕೆಯಲ್ಲಿ ಪ್ರಾಮಾಣಿಕತೆಯಿಂದ ಸಕ್ರಿಯರಾಗಿ, ರೇಂಜ್, ಮದ್ರಸ ಹಾಗು ಮದ್ರಸ ಅಧ್ಯಾಪಕರ ಶ್ರೇಯೋಭಿವೃದ್ಧಿಗೆ ಬದ್ಧತೆಯಿಂದ ಸಕಾರಾತ್ಮಕ ಚಿಂತನೆಗಳ ಮೂಲಕ ಜವಾಬ್ದಾರಿ ನಿರ್ವಹಿಸಬೇಕು ಎಂದು ತಿಳಿಸಿದರು. ಎಸ್ ಜೆ ಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಕೆ ಎಂ ಕಾಮಿಲ್ ಸಖಾಫಿ ಶುಭಹಾರೈಸಿ ಮಾತನಾಡಿದರು. ದ.ಕ ಜಿಲ್ಲಾ ವೆಸ್ಟ್ ಅಧ್ಯಕ್ಷರಾದ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶಾಫಿ ಮದನಿ ಕರಾಯ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಅಶ್ರಫ್ ಇಮ್ದಾದಿ ಲೆಕ್ಕಪತ್ರ ಮಂಡಿಸಿದರು.
ಬಳಿಕ ಹಾಲಿ ಸಮಿತಿಯನ್ನು ವಿಸರ್ಜಿಸಿ ಚುನಾವಣಾ ವೀಕ್ಷಕರಾಗಿ ಆಗಮಿಸಿದ ಅಬ್ದುಲ್ ಹಮೀದ್ ಸಅದಿ ಮೂರುಗೋಳಿ ಎಸ್ ಜೆ ಎಂ ದ.ಕ ಜಿಲ್ಲಾ ವೆಸ್ಟ್ ಇದರ ನೂತನ ಸಮಿತಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿ ವಿಷಯ ಮಂಡಿಸಿದರು.
ಎಸ್ ಜೆ ಎಂ ದ.ಕ ಜಿಲ್ಲಾ (ವೆಸ್ಟ್) ಇದರ 2025 -2028 ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಬೂಬಕ್ಕರ್ ಮುಸ್ಲಿಯಾರ್ ಕುಕ್ಕಾಜೆ ಮರು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಸಖಾಫಿ ಸುರತ್ಕಲ್, ಕೋಶಾಧಿಕಾರಿಯಾಗಿ ಅಶ್ರಫ್ ಇಂದಾದಿ ದೇರಳಕಟ್ಟೆ ಆಯ್ಕೆಯಾದರು.
ಐಟಿ,ಎಕ್ಸಾಮ್ ವಿಭಾಗದ ಉಪಾಧ್ಯಕ್ಷರಾಗಿ ಅಬ್ದುಲ್ ಸತ್ತಾರ್ ಸಖಾಫಿ ಜೆಪ್ಪು, ಕಾರ್ಯದರ್ಶಿಯಾಗಿ ಝಕರಿಯ್ಯ ಸಖಾಫಿ ಕಾಟಿಪಳ್ಳ, ಮಿಷನರಿ ವಿಭಾಗದ ಉಪಾಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಸಖಾಫಿ ಮಂಜನಾಡಿ, ಕಾರ್ಯದರ್ಶಿಯಾಗಿ ಸೆರ್ಕಳ ಇಬ್ರಾಹಿಂ ಸಖಾಫಿ, ವೆಲ್ಫೇರ್ ವಿಭಾಗದ ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಸಅದಿ ಬಜ್ಪೆ, ಕಾರ್ಯದರ್ಶಿಯಾಗಿ ಹೈದರ್ ಅಲಿ ಹಿಮಮಿ ದೇರಳಕಟ್ಟೆ, ಮ್ಯಾಗಝಿನ್ ವಿಭಾಗದ ಉಪಾಧ್ಯಕ್ಷರಾಗಿ ಯುನೂಸ್ ಇಂದಾದಿ ಉಳ್ಳಾಲ, ಕಾರ್ಯದರ್ಶಿಯಾಗಿ ಹಸನ್ ಝುಹ್ರಿ ಮಂಗಳಪೇಟೆ, ಟ್ರೈನಿಂಗ್ ವಿಭಾಗದ ಉಪಾಧ್ಯಕ್ಷರಾಗಿ ಶರೀಫ್ ಸಅದಿ ಮಂಜನಾಡಿ, ಕಾರ್ಯದರ್ಶಿಯಾಗಿ ರಿಯಾಝ್ ಅಹ್ಸನಿ ಕಿನ್ನಿಗೋಳಿ, ಪಿಂಚಣಿ ವಿಭಾಗದ ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಸಖಾಫಿ ಸುರತ್ಕಲ್, ಕಾರ್ಯದರ್ಶಿಯಾಗಿ ನವಾಝ್ ಸಖಾಫಿ ಉಳ್ಳಾಲ ಆಯ್ಕೆಯಾದರು.
ಕಾರ್ಯಕಾರಿಣಿ ಸದಸ್ಯರುಗಳಾಗಿ ಸಯ್ಯದ್ ಸಾಬಿತ್ ಸಖಾಫಿ ಪಾಟ್ರಕೋಡಿ, ಪಿ ಎಂ ಮುಹಮ್ಮದ್ ಮದನಿ ಪೂಡಲ್, ಅಬ್ದುಲ್ ಅಝೀಝ್ ನೂರಾನಿ, ಇಬ್ರಾಹಿಂ ನಯೀಮಿ ಅಸೈಗೋಳಿ, ಅಬ್ದುಲ್ ನಾಸಿರ್ ಮದನಿ ಕಾಟಿಪಳ್ಳ, ಆಸೀಫ್ ಸಖಾಫಿ ಜೆಪ್ಪು, ಅಬ್ದುಲ್ ರಹ್ಮಾನ್ ಮದನಿ ಮಂಗಳೂರು, ಹನೀಫ್ ಮುಸ್ಲಿಯಾರ್ ಮಂಗಳೂರು, ಅಬ್ದುಲ್ ಮಜೀದ್ ಸಖಾಫಿ ಕೈಕಂಬ, ಇಲ್ಯಾಸ್ ಸಅದಿ ಕೈಕಂಬ, ಅಶ್ರಫ್ ಸಅದಿ ಕಿನ್ನಿಗೋಳಿ, ರಫೀಕ್ ಮದನಿ ಪಾಂಡೇಶ್ವರ, ರಝಾಕ್ ಸಖಾಫಿ ಕೊಣಾಜೆ, ಸಾಬಿತ್ ಸಅದಿ ತಲಪಾಡಿ ಮತ್ತು ಖಾಲಿದ್ ಸಅದಿ ಬಜ್ಪೆ ಇವರುಗಳನ್ನು ಆರಿಸಲಾಯಿತು.
ರಾಜ್ಯ ಕೌನ್ಸಿಲರುಗಳಾಗಿ ಅಬೂಬಕ್ಕರ್ ಮುಸ್ಲಿಯಾರ್ ಕುಕ್ಕಾಜೆ, ಮುಹಮ್ಮದ್ ಸಖಾಫಿ ಸುರತ್ಕಲ್, ಅಶ್ರಫ್ ಇಂದಾದಿ ದೇರಳಕಟ್ಟೆ, ಪಿ ಎಂ ಮುಹಮ್ಮದ್ ಮದನಿ ಪೂಡಲ್, ಅಬ್ದುಲ್ ಅಝೀಝ್ ನೂರಾನಿ, ಇಬ್ರಾಹಿಂ ನಯೀಮಿ ಅಸೈಗೋಳಿ, ಝಕರಿಯಾ ಸಖಾಫಿ ಕಾಟಿಪಳ್ಳ, ಮುಹಮ್ಮದ್ ಹನೀಫ್ ಸಅದಿ ಬದ್ಯಾರ್ ಮತ್ತು ಮುಹ್ಯಿದ್ದೀನ್ ಮದನಿ ಉಳ್ಳಾಲ ಆಯ್ಕೆಯಾದರು.
ದ.ಕ ಜಿಲ್ಲಾ ವೆಸ್ಟ್ ನೂತನ ಪ್ರಧಾನ ಕಾರ್ಯದರ್ಶಿ ಧನ್ಯವಾದಗೈದರು.
Comments
Post a Comment