Posts

Showing posts from September, 2025

ದ.ಕ ವೆಸ್ಟ್ ಜಿಲ್ಲಾ ಮುಅಲ್ಲಿಂ ಮೆಹರ್ಜಾನ್ ನಿರ್ವಹಣಾ ಸಮಿತಿ ಅಸ್ತಿತ್ವಕ್ಕೆ

Image
ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ದ.ಕ ವೆಸ್ಟ್ ಜಿಲ್ಲಾ ಸಭೆ ಮಂಗಳೂರು ಪಡೀಲ್ ಇಲ್ ಸೆಂಟರಿನಲ್ಲಿ ನಡೆಯಿತು. ರಾಜ್ಯ ಜೊತೆ ಕಾರ್ಯದರ್ಶಿ ಇಬ್ರಾಹಿಂ ನಯೀಮಿ ಸಭೆಯನ್ನು ಉದ್ಘಾಟಿಸಿದರು. ವೆಸ್ಟ್ ಜಿಲ್ಲಾಧ್ಯಕ್ಷರಾದ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ಮಾತನಾಡಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕೇಂದ್ರ ಸಮಿತಿಯ ನಿರ್ದೇಶನ ಪ್ರಕಾರ 'ಸಮಸ್ತ ಸೆಂಚ್ಯುನರಿ' ಪ್ರಯುಕ್ತ ನಡೆಸಲ್ಪಡುವ ಜಿಲ್ಲಾ ಮುಅಲ್ಲಿಂ ಸಮ್ಮೇಳನದ ಕರ್ನಾಟಕ ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭವು ಮಂಗಳೂರಿನ ಪುರಭವನದಲ್ಲಿ 2025 ಅಕ್ಟೋಬರ್ 14 ರಂದು ನಡೆಯಲಿದೆ. ಇದರ ಯಶಸ್ವಿಗಾಗಿ ದ.ಕ ಜಿಲ್ಲಾ ವೆಸ್ಟ್ ಇದರ ಅಧೀನದ ಪ್ರತೀ ರೇಂಜುಗಳಿಗೆ ಕರೆ ನೀಡಿದರು. ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮದ್ರಸ ಅಧ್ಯಾಪಕರುಗಳಿಗಾಗಿ ಎರಡು ವರ್ಷಕ್ಕೊಮ್ಮೆ ನಡೆಯುವ ಪ್ರತಿಭಾ ಕಾರ್ಯಕ್ರಮ ಮುಅಲ್ಲಿಂ ಮೆಹರ್ಜಾನ್ ಎಸ್ ಜೆ ಎಂ ಇದರ ಪ್ರತೀ ಘಟಕಗಳಲ್ಲಿ ನಡೆಯಲಿದ್ದು, ದ.ಕ ವೆಸ್ಟ್ ಜಿಲ್ಲಾ ಮುಅಲ್ಲಿಂ ಮೆಹರ್ಜಾನ್ ನವೆಂಬರ್ ನಾಲ್ಕರಂದು ನಡೆಯಲಿದೆ. ಇದರ ಯಶಸ್ವೀ ಕಾರ್ಯ ಚಟುವಟಿಕೆಗಳಿಗಾಗಿ ಮುಅಲ್ಲಿಂ ಮೆಹರ್ಜಾನ್ ನಿರ್ವಹಣಾ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಚೇರ್ಮಾನ್ ಆಗಿ ಅಬ್ದುಲ್ ಮಜೀದ್ ಸಖಾಫಿ ಕೈಕಂಬ, ಚೀಫ್ ಕನ್ವೀನರಾಗಿ ಸೆರ್ಕಳ ಇಬ್ರಾಹಿಂ ಸಖಾಫಿ ಮತ್ತು ಸದಸ್ಯರುಗಳಾಗಿ ದ.ಕ ಜಿಲ್ಲಾ ವೆಸ್ಟ್ ಇದರ PST ಗಳಾದ ಅಬೂಬಕರ್ ಮುಸ್ಲಿಯಾರ್ ಕುಕ್ಕಾ...

ಎಸ್ ಜೆ ಎಂ ಉಳ್ಳಾಲ ರೇಂಜ್ ವತಿಯಿಂದ ನಡೆದ ಗ್ರ್ಯಾಂಡ್ ಮಾದರಿ ಮೌಲಿದ್ ಮಜ್ಲಿಸ್

Image
ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಉಳ್ಳಾಲ ರೇಂಜ್ ವತಿಯಿಂದ ಗ್ರ್ಯಾಂಡ್ ಮಾದರಿ ಮೌಲಿದ್ ಮಜ್ಲಿಸ್ ಉಳ್ಳಾಲದ ಕಲ್ಲಾಪು ಜುಮಾ ಮಸೀದಿಯಲ್ಲಿ ನಡೆಯಿತು. ಅಳೇಕಲ ಜಾಮಿಉಲ್ ಅಮೀನ್ ಮಸ್ಜಿದ್ ಖತೀಬರಾದ ಅಬೂ ಝಿಯಾದ್ ಮದನಿ ಪಟ್ಟಾಂಬಿ ಉಸ್ತಾದ್ ದುಆ ನೆರವೇರಿಸಿದರು. ಮೌಲಿದ್ ಪಾರಾಯಣದ ನಂತರ ನಡೆದ ಸಭೆಯನ್ನು ಕಲ್ಲಾಪು ಜುಮಾ ಮಸ್ಜಿದ್ ಖತೀಬರಾದ ಶರೀಫ್ ಸಅದಿ ಉದ್ಘಾಟಿಸಿದರು. ಪಟ್ಲ ತಖ್ವಾ ಜುಮಾ ಮಸ್ಜಿದ್ ಖತೀಬರಾದ ಎಂ ಸಿ ಮುಹಮ್ಮದ್ ಫೈಝಿ ಮೋಙಂ, ಕೋಡಿ ಬದ್ರಿಯಾ ಜುಮಾ ಮಸ್ಜಿದ್ ಖತೀಬರಾದ ಆದಂ ಫೈಝಿ, ಮುಕ್ಕಚೇರಿ ಅಬೂಬಕರ್ ಸಿದ್ದೀಖ್ ಜುಮಾ ಮಸ್ಜಿದ್ ಖತೀಬರಾದ ಶರೀಫ್ ಬಾಖವಿ ಶುಭ ಹಾರೈಸಿ ಮಾತನಾಡಿದರು. ವೀಡಿಯೋ 1 ನೋಡಲು ನನ್ನನ್ನು ಮುಟ್ಟಿ ಎಸ್ ಜೆ ಎಂ ಕರ್ನಾಟಕ ರಾಜ್ಯ ತರಬೇತುದಾರರಾದ ಯೂನುಸ್ ಇಮ್ದಾದಿ ಅಲ್ ಫುರ್ಖಾನಿ ಮಾತನಾಡಿ ಪ್ರಪಂಚ ಸ್ರಷ್ಠಿಯಾದಿಯಿಂದ ಇಹ ಪರಲೋಕದಲ್ಲಿ ಶಾಶ್ವತವಾಗಿ ಮನುಕುಲಕ್ಕೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ ರವರು ಆಸರೆ ಹಾಗು ಮಾದರಿಯಾಗಿದ್ದಾರೆ, ಅವರ ಮೇಲಿನ ಪ್ರೀತಿ, ಅವರು ತೋರಿಸಿದ ಸತ್ಯ, ನ್ಯಾಯ, ಶಾಂತಿ ಸಹಬಾಳ್ವೆ ನಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.  ವೀಡಿಯೋ 2 ನೋಡಲು ನನ್ನನ್ನು ಮುಟ್ಟಿ ಮುಹಮ್ಮದ್ ಇರ್ಫಾನ್ ಸಅದಿ ಅಳೇಕಲ, ಅರ್ಫಾಝ್ ಮದನಿ ಮಿಲ್ಲತ್ ನಗರ, ಹುಸೈನ್ ಮದನಿ ಅನ್ನೂರಿ ಅಳ...