ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ SJM ಉಳ್ಳಾಲ ರೇಂಜ್ ಆಶ್ರಯದಲ್ಲಿ ನಡೆದ ರೇಂಜ್ ಕಾಂಫರೆನ್ಸ್.ರಸ ಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ದಾರಂದಬಾಗಿಲು ತರ್ಬಿಯತುಲ್ ಅನಾಂ ಮದ್ರಸದ ಮುಅಲ್ಲಿಂ ಜಾಬಿರ್ ಫಾಳಿಲಿ.ಸುಂದರಬಾಗ್ ಜಮಾಅತಿನ ಭರ್ಜರಿ ಅತಿಥಿ ಸತ್ಕಾರಕ್ಕೆ ಮುಅಲ್ಲಿಮರಿಂದ ವ್ಯಾಪಕ ಪ್ರಶಂಶೆ.
ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ SJM ಉಳ್ಳಾಲ ರೇಂಜ್ ಆಶ್ರಯದಲ್ಲಿ ರೇಂಜ್ ಕಾಂಫರೆನ್ಸ್ ಉಳ್ಳಾಲ ಸುಂದರಬಾಗಿನ ಬದ್ರಿಯಾ ಮದ್ರಸ ಆಡಿಟೋರಿಯಂ ನಲ್ಲಿ ಇತ್ತೀಚೆಗೆ ನಡೆಯಿತು. ಸುಂದರಬಾಗ್ ಮದ್ರಸದ ಮುಖ್ಯೋಪಾಧ್ಯಾಯರಾದ ಕೆ ಎಂ ಮುಹ್ಯಿದ್ದೀನ್ ಮದನಿ ಕಟ್ಟತ್ತಿಲ ದುಆ ನೆರವೇರಿಸಿದರು. ಸುಂದರಬಾಗ್ ಮದ್ರಸ ಮುಅಲ್ಲಿಮರಾದ ಹಾಫಿಝ್ ಮುಹಮ್ಮದ್ ಅಫ್ಳಲ್ ಹಿಮಮಿ ಸಖಾಫಿ ಖಿರಾಅತ್ ಪಠಿಸಿ, ಸಭೆಗೆ ಚಾಲನೆ ನೀಡಿದರು. ಸುಂದರಬಾಗ್ ಜುಮಾ ಮಸ್ಜಿದ್ ಖತೀಬರಾದ ಎನ್ ಡಿ ಮದನಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ರೇಂಜ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ವರದಿ ಮಂಡಿಸಿದರು. ಕೋಶಾಧಿಕಾರಿ ವಿ ಎ ಮುಹಮ್ಮದ್ ಸಖಾಫಿ ಲೆಕ್ಕಪತ್ರ ಮಂಡಿಸಿದರು. ಸುಂದರಬಾಗ್ ಮಸೀದಿ, ಮದ್ರಸದ ಆಡಳಿತ ಸಮಿತಿಯ ಅಧ್ಯಕ್ಷರಾದ ಆಸಿಫ್, ಪ್ರಧಾನ ಕಾರ್ಯದರ್ಶಿ ಹಂಝ, ಜೊತೆ ಕಾರ್ಯದರ್ಶಿ ರಿಲ್ವಾನ್, ಸದಸ್ಯರಾದ ನೌಶಾದ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಸಭೆಯ ಪ್ರಾರಂಭಕ್ಕೂ ಮುನ್ನ ದಾರಂದಬಾಗಿಲು ತರ್ಬಿಯತುಲ್ ಅನಾಂ ಮದ್ರಸದ ಮುಅಲ್ಲಿಂ ಜಾಬಿರ್ ಫಾಳಿಲಿ ವಿದ್ಯಾರ್ಥಿಗಳಿಗೆ ಮಾದರಿಯುಕ್ತ ತರಗತಿ ನಡೆಸಿದರು. ಮುಕ್ಕಚೇರಿ ಅಲ್ ಮುಬಾರಕ್ ಮದ್ರಸದ ಮುಅಲ್ಲಿಮರಾದ ಶರೀಫ್ ಬಾಖವಿ ಕಿತಾಬ್ ಪರಿಚಯ ಮಾಡಿದರು. ಸಭೆಯ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಪಾಂಡೇಲ್ ಪಕ್ಕಾ ಮುಖ್ಯೋಪಾಧ್ಯಾಯರಾದ ಅಬ್ದುಲ್ ಖಾದಿರ್ ಸಅದ...