ಎಸ್ ಬಿ ಎಸ್ ವಾರ್ಷಿಕ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ.

ನಜಾತುಸ್ಸಿಬಿಯಾನ್ ಹೈಯರ್ ಸೆಕೆಂಡರಿ ಮದ್ರಸ ಉಳ್ಳಾಲ ಅಳೇಕಲ ಇದರ ವಿದ್ಯಾರ್ಥಿ ಸಂಘಟನೆಯಾದ ಸುನ್ನೀ ಬಾಲ ಸಂಘ ( ಎಸ್ ಬಿ ಎಸ್ ) ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಅಳೇಕಲ ಮದ್ರಸದ ಮುಖ್ಯೋಪಾಧ್ಯಾಯರಾದ ಇಬ್ರಾಹಿಂ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಹಾಯಕ ಇಮಾಮ್ ಇರ್ಫಾನ್ ಸಅದಿ ದುಆ ಮಾಡಿದರು. ಮುದಬ್ಬಿರ್ ಹುಸೈನಾರ್ ಮದನಿ ಸ್ವಾಗತಿಸಿದರು.

ಸಭೆಯನ್ನು ಝೈನುದ್ದೀನ್ ಮದನಿ ಉದ್ಘಾಟಿಸಿದರು. ಝುಬೈರ್ ಪುರ್ಖಾನಿ, ನವಾಝ್ ಸಖಾಫಿ ಮತ್ತು 
ಅಳೇಕಲ ಮಸೀದಿ ಮದ್ರಸದ ಪ್ರಧಾನ ಕಾರ್ಯದರ್ಶಿ ಜಾಫರ್ ಶುಭ ಹಾರೈಸಿ ಮಾತನಾಡಿದರು.

ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.  
ಅದ್ಯಕ್ಷರಾಗಿ ಶಾ‌‌ಹುಲ್ ಹಮೀದ್, ಉಪಾಧ್ಯಕ್ಷರುಗಳಾಗಿ ಅಮ್ರಾಝ್ ಮತ್ತು ಶಹಝಾದ್, ಪ್ರದಾನ ಕಾರ್ಯದರ್ಶಿಯಾಗಿ ನುಹೈದ್, ಜೊತೆ ಕಾರ್ಯದರ್ಶಿಗಳಾಗಿ ಅರ್ಶಾಕ್ ಮತ್ತು ಫ‌ಹೀಮ್, ಕೋಶಾಧಿಕಾರಿಯಾಗಿ ರಫಾನ್ ಆಯ್ಕೆಯಾದರು.
ರಾತ್ರಿ ತರಗತಿ ಲೀಡರಾಗಿ ರಿಹಾನ್, ಬೆಳಿಗ್ಗೆ ತರಗತಿ ಲೀಡರಾಗಿ ಅಫ್ಜಲ್ 
ಇವರನ್ನು ಆರಿಸಲಾಯಿತು 

5 ನೇ ತರಗತಿಯಿಂದ +1 ತನಕ ವಿರುವ ತರಗತಿ ಗಳಿಂದ ತಲಾ ಮೂರು ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆರಿಸಲಾಯಿತು.  ಹನೀಫ್ ಸಅದಿ ಧನ್ಯವಾದ ಮಾಡಿದರು.

Comments

Popular posts from this blog

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ( ಎಸ್ ಜೆ ಎಂ ) ದ.ಕ ಜಿಲ್ಲಾ ವೆಸ್ಟ್ ಮಹಾಸಭೆ. ನೂತನ ಪದಾಧಿಕಾರಿಗಳ ಆಯ್ಕೆ

ಸಮಸ್ತ ಸೆಂಟಿನರಿ ಸಂಭ್ರಮದ ಅಂಗವಾಗಿ ನಡೆದ ದ.ಕ.ಜಿಲ್ಲಾ ಮುಅಲ್ಲಿಂ ಸಮ್ಮೇಳನ

ದೇಶ ವಿದೇಶಗಳಲ್ಲಿ ಏಕಕಾಲದಲ್ಲಿ ನಡೆದ ಸ್ಮಾರ್ಟ್ ಸ್ಕಾಲರ್‌ಶಿಪ್ ಮುಖ್ಯ ಪರೀಕ್ಷೆ