Posts

Showing posts from January, 2026

ಹ್ರದಯ ಸ್ಪರ್ಶಿ ಬೀಳ್ಕೊಡುಗೆ

Image
ಉಳ್ಳಾಲ ಅಳೇಕಲ ನಜಾತುಸ್ಸಿಬಿಯಾನ್ ಮದ್ರಸದಲ್ಲಿ ಮುಅಲ್ಲಿಂ ಆಗಿ ಅನನ್ಯ ಸೇವೆ ನೀಡುತ್ತಿರುವ ನಿಝಾಂ ಅಮಾನಿ ಉಸ್ತಾದರು ಪವಿತ್ರ ಉಮ್ರಾ ಯಾತ್ರೆ ಹೊರಟಿದ್ದು, ನಜಾತುಸ್ಸಿಬಿಯಾನ್ ಮದ್ರಸದ ಅಧ್ಯಾಪಕರ ಒಕ್ಕೂಟ ಮತ್ತು ಸುನ್ನೀ ಬಾಲ ಸಂಘ ಎಸ್ ಬಿ ಎಸ್ ಅಳೇಕಲ ಶಾಖೆಯ ವತಿಯಿಂದ ಸ್ಮರಣಿಕೆ ನೀಡಿ ಹ್ರದಯ ಸ್ಪರ್ಶಿ ಬೀಳ್ಕೊಡುಗೆ ನಡೆಸಲಾಯಿತು.  ಅಲ್ಲಾಹನು ಅವರ ಯಾತ್ರೆಯನ್ನು ಸುಗಮಗೊಳಿಸಲಿ. ಪವಿತ್ರ ಉಮ್ರಾ ಅಲ್ಲಾಹನು ಸ್ವೀಕರಿಸಲಿ. ಆಮೀನ್

ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ SJM ಉಳ್ಳಾಲ ರೇಂಜ್ ಆಶ್ರಯದಲ್ಲಿ ನಡೆದ ಮುಅಲ್ಲಿಂ ಕಾಂಫರೆನ್ಸ್

Image
ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ SJM ಉಳ್ಳಾಲ ರೇಂಜ್ ಆಶ್ರಯದಲ್ಲಿ ಮುಅಲ್ಲಿಂ ಕಾಂಫರೆನ್ಸ್ ತೋಟ ಇಶಾಅತುಸ್ಸುನ್ನಃ ಮದ್ರಸ ಸಭಾ ಭವನದಲ್ಲಿ ನಡೆಯಿತು. ರೇಂಜ್ ಕೋಶಾಧಿಕಾರಿ ವಿ ಎ ಮುಹಮ್ಮದ್ ಸಖಾಫಿ ಉಳ್ಳಾಲ ದುಆ ನೆರವೇರಿಸಿದರು. ಇರ್ಫಾನ್ ಸಅದಿ ಅಳೇಕಲ ಖಿರಾಅತ್ ಪಠಿಸಿ, ಸಭೆಗೆ ಚಾಲನೆ ನೀಡಿದರು. ಸಭೆಯ ವೀಡಿಯೋ ನೋಡಲು ನನ್ನನ್ನು ಮುಟ್ಟಿ ರಾಜ್ಯ ಎಂಇಪಿ ತರಬೇತುದಾರ ಯೂನುಸ್ ಇಮ್ದಾದಿ ಅಲ್ ಫುರ್ಖಾನಿ ಸಭೆಯನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ವರದಿಯನ್ನು, ಕೋಶಾಧಿಕಾರಿ ವಿ ಎ ಮುಹಮ್ಮದ್ ಸಖಾಫಿ ಲೆಕ್ಕಪತ್ರ ಮಂಡಿಸಿದರು. ಸಯ್ಯಿದ್ ಮದನಿ ದರ್ಗಾ ಮುಫತ್ತಿಶರಾದ ಹುಸೈನ್ ಸಅದಿ ಹೊಸ್ಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಲಾಲುದ್ದೀನ್ ಮದನಿ ಉಳ್ಳಾಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಾಂಡೇಲ್ ಪಕ್ಕಾ ಮದ್ರಸ ಸದರ್ ಮುಅಲ್ಲಿಮ್ ಅಬ್ದುಲ್ ಖಾದರ್ ಸಅದಿ ಮಾದರಿ ತರಗತಿ ನಡೆಸಿದರು. ಕಲ್ಲಾಪು ಜುಮಾ ಮಸ್ಜಿದ್ ಖತೀಬರಾದ ಶರೀಫ್ ಸಅದಿ ಕಿತಾಬ್ ಪರಿಚಯ ಮಾಡಿದರು. ಕೆ ಎಂ ಮುಹ್ಯಿದ್ದೀನ್ ಮದನಿ ಸುಂದರಭಾಗ್ ರಜಬಿನ ಸಂದೇಶ ಎಂಬ ವಿಷಯದಲ್ಲಿ ಸಮಗ್ರವಾದ ಪ್ರಬಂಧ ಮಂಡಿಸಿದರು. ರಾಝಿಖ್ ಹನೀಫಿ ಮುಕ್ಕಚೇರಿ ವಾರ್ತಾ ವಾಚಿಸಿದರು. ಪ್ರಸ್ತುತ ಸಭೆಯಲ್ಲಿ ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ದೇಶ ವಿ...

ಸ್ಮಾರ್ಟ್ ಸ್ಕಾಲರ್ಶಿಪ್ ಮುಖ್ಯ ಪರೀಕ್ಷೆಯಲ್ಲಿ ಚಿನ್ನ ಪಡೆದ ವಿದ್ಯಾರ್ಥಿನಿಗೆ ಎಸ್ ಜೆ ಎಂ ಉಳ್ಳಾಲ ರೇಂಜ್ ವತಿಯಿಂದ ಅಭಿನಂದನೆ

Image
ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ದೇಶ ವಿದೇಶಗಳಲ್ಲಿ ಏಕ ಕಾಲದಲ್ಲಿ ನಡೆಸಿದ ಸ್ಮಾರ್ಟ್ ಸ್ಕಾಲರ್ಶಿಪ್ ಮುಖ್ಯ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನ ಪಡೆದ ಅಳೇಕಲದ ನಜಾತುಸ್ಸಿಬಿಯಾನ್ ಹೈಯರ್ ಸೆಕೆಂಡರಿ ಮದ್ರಸದ +2 ತರಗತಿಯ ವಿದ್ಯಾರ್ಥಿನಿ ಫಾತಿಮ ಮುನೀಬಃಳಿಗೆ ಎಸ್ ಜೆ ಎಂ ಉಳ್ಳಾಲ ರೇಂಜ್ ವತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಚಿತ್ರದಲ್ಲಿ ಮುನೀಬಃಳ ತಂದೆ ಅಬ್ಬಾಸ್ ಮದನಿ ಅಳೇಕಲ, ಮುನೀಬಃಳ ಉಸ್ತಾದ್ ಹನೀಫ್ ಸಅದಿ ಅಳೇಕಲ, ಉಳ್ಳಾಲ ರೇಂಜ್ ಅಧ್ಯಕ್ಷರಾದ ಜಲಾಲುದ್ದೀನ್ ಮದನಿ ಉಳ್ಳಾಲ, ಸಯ್ಯಿದ್ ಮದನಿ ಅರೆಬಿಕ್ ಎಜ್ಯುಕೇಶನಲ್ ಟ್ರಸ್ಟ್ ಮುಫತ್ತಿಶರಾದ ಹುಸೈನ್ ಸಅದಿ ಹೊಸ್ಮಾರ್, ಅಳೇಕಲ ನಜಾತುಸ್ಸಿಬಿಯಾನ್ ಮದ್ರಸದ ಸದರ್ ಮುಅಲ್ಲಿಮರಾದ ಸೆರ್ಕಳ ಇಬ್ರಾಹಿಂ ಸಖಾಫಿ, ರೇಂಜ್ ಪರೀಕ್ಷಾ ವಿಭಾಗದ ಉಪಾಧ್ಯಕ್ಷರಾದ ಕೆ ಎಂ ಮುಹ್ಯಿದ್ದೀನ್ ಮದನಿ ಕಟ್ಟತ್ತಿಲ, ಮುಕ್ಕಚೇರಿ ಜುಮಾ ಮಸ್ಜಿದ್ ಖತೀಬರಾದ ಶರೀಫ್ ಬಾಖವಿ ಯವರನ್ನು ಕಾಣಬಹುದು.