Posts

Showing posts from April, 2026

ಪವಿತ್ರ ಹಜ್ ಯಾತ್ರೆ ಹೊರಡುತ್ತಿರುವ ಪಿ ಎಂ ಮದನಿ ಉಸ್ತಾದರಿಗೆ ಬೀಳ್ಕೊಡುಗೆ.

Image
ಸುನ್ನತ್ ಜಮಾಅತಿನ ಪ್ರಮುಖ ಸಂಘಟನೆಯಾದ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್ ಜೆ ಎಂ ) ನ ತಳ ಮಟ್ಟದಿಂದ ರಾಜ್ಯ ಮಟ್ಟದವರೆಗೆ ತನ್ನ ಕಾರ್ಯ ಚಟುವಟಿಕೆಯ ಮೂಲಕ ಬೆಳೆದು ಬಂದ ಎಸ್ ಜೆ ಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ಎಂ ಮದನಿ ಪೂಡಲ್ ರವರು ಈ ವರ್ಷದ ಪವಿತ್ರ ಹಜ್ ಯಾತ್ರೆಗೆ ಹೊರಟಿರುತ್ತಾರೆ. ಇವರಿಗೆ ಎಸ್ ಜೆ ಎಂ ದ.ಕ ವೆಸ್ಟ್ ಜಿಲ್ಲಾ ವತಿಯಿಂದ ಪಡೀಲ್ ಇಲ್ಮ್ ಸೆಂಟರಿನಲ್ಲಿ  ಶುಭ ಹಾರೈಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವೆಸ್ಟ್ ಜಿಲ್ಲಾಧ್ಯಕ್ಷರಾದ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಖಾಫಿ, ಎಸ್ ಎಂ ಎ ವೆಸ್ಟ್ ಜಿಲ್ಲಾಧ್ಯಕ್ಷರಾದ ಹನೀಫ್ ಸಅದಿ ಮತ್ತು ಜಿಲ್ಲಾ ನಾಯಕರು, ರೇಂಜ್ ನಾಯಕರು ಉಪಸ್ಥಿತರಿದ್ದರು.

ಸಮುದಾಯ ಜಾಗ್ರತಿ ಅಭಿಯಾನ ಇದರ ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭ ಮತ್ತು ಬ್ರಹತ್ ಲೀಡರ್ಸ್ ಮೀಟ್ ಇದರ ಪೂರ್ವಭಾವಿ ಸಭೆ

Image
ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ವತಿಯಿಂದ ಎಪ್ರಿಲ್ 22 ಬುಧವಾರ ಮಂಗಳೂರು ಟೌನ್ ಹಾಲಿನಲ್ಲಿ  ನಡೆಯಲಿರುವ ಜಿಲ್ಲೆಯ 600 ಕ್ಕೂ ಹೆಚ್ಚು ಮೊಹಲ್ಲಾದ ಬ್ರಹತ್ ಲೀಡರ್ಸ್ ಮೀಟ್ ಇದರ ಪೂರ್ವಭಾವಿ ಸಭೆ ಮತ್ತು ಎಪ್ರಿಲ್ 14 ರಿಂದ ಜೂನ್ 30 ರವರೆಗೆ ಖೈರು ಉಮ್ಮ ಎಂಬ ಶೀರ್ಷಿಕೆಯಡಿ ಸುನ್ನೀ ಮ್ಯಾನೇಜ್ಮೆಂಟ್ ಎಸೋಸಿಯೇಶನ್ ರಾಜ್ಯ ಮತ್ತು ಅಧೀನ ಘಟಕಗಳ ವತಿಯಿಂದ  ನಡೆಯಲಿರುವ ಸಮುದಾಯ ಜಾಗ್ರತಿ ಅಭಿಯಾನ ಇದರ ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭ ಪಡೀಲ್ ಇಲ್ಮ್ ಸೆಂಟರಿನಲ್ಲಿ ನಡೆಯಿತು. ಪುಂಡೂರು ಇಬ್ರಾಹಿಂ ಸಖಾಫಿ ದುಆ ನೆರವೇರಿಸಿದರು. ಎಸ್ ಜೆ ಎಂ ರಾಜ್ಯಾಧ್ಯಕ್ಷರಾದ ಜೆಪ್ಪು ಅಬ್ದುಲ್ ರಹ್ಮಾನ್ ಮದನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಎಪ್ರಿಲ್ 22 ರಂದು ನಡೆಯಲಿರುವ ಬ್ರಹತ್ ಲೀಡರ್ಸ್ ಮೀಟ್ ಮತ್ತು ಸುನ್ನೀ ಮ್ಯಾನೇಜ್ಮೆಂಟ್ ಎಸೋಸಿಯೇಶನ್ ರಾಜ್ಯ ಮತ್ತು ಅಧೀನ ಘಟಕಗಳ ವತಿಯಿಂದ ಸಮುದಾಯ ಜಾಗೃತಿ ಅಭಿಯಾನದ ಅಂಗವಾಗಿ ನಿಗದಿತ ದಿನಾಂಕಗಳಲ್ಲಿ ನಡೆಸಲ್ಪಡುವ ಕಮ್ಯೂನಿಟಿ ಟಾಕ್,  ಸಮುದಾಯದ ಸ್ಥಿತಿಗತಿಗಳ ಬಗ್ಗೆ ಅವಲೋಕಿಸುವ ಕಮ್ಯೂನಿಟಿ ಡಿಬೇಟ್, ಕಮ್ಯೂನಿಟಿ ಕಾಂಫರೆನ್ಸ್ ಮತ್ತು ಸಮಾರೋಪ ಸಮಾರಂಭ ಯಶಸ್ವಿಗೊಳಿಸಲು ಕರೆ ನೀಡಿದರು. ಎಸ್ ಎಂ ಎ ರಾಜ್ಯ ಉಪಾಧ್ಯಕ್ಷರಾದ ಹಮೀದ್ ಹಾಜಿ ಕೊಡುಂಗಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ಸಮುದಾಯ ಜಾಗ್ರತಿ ಅಭಿಯಾನದ ಉದ್ಘಾಟನಾ ಸಮಾರಂಭದ ಪೋ...