ಸಮುದಾಯ ಜಾಗ್ರತಿ ಅಭಿಯಾನ ಇದರ ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭ ಮತ್ತು ಬ್ರಹತ್ ಲೀಡರ್ಸ್ ಮೀಟ್ ಇದರ ಪೂರ್ವಭಾವಿ ಸಭೆ


ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ವತಿಯಿಂದ ಎಪ್ರಿಲ್ 22 ಬುಧವಾರ ಮಂಗಳೂರು ಟೌನ್ ಹಾಲಿನಲ್ಲಿ  ನಡೆಯಲಿರುವ ಜಿಲ್ಲೆಯ 600 ಕ್ಕೂ ಹೆಚ್ಚು ಮೊಹಲ್ಲಾದ ಬ್ರಹತ್ ಲೀಡರ್ಸ್ ಮೀಟ್ ಇದರ ಪೂರ್ವಭಾವಿ ಸಭೆ ಮತ್ತು ಎಪ್ರಿಲ್ 14 ರಿಂದ ಜೂನ್ 30 ರವರೆಗೆ ಖೈರು ಉಮ್ಮ ಎಂಬ ಶೀರ್ಷಿಕೆಯಡಿ ಸುನ್ನೀ ಮ್ಯಾನೇಜ್ಮೆಂಟ್ ಎಸೋಸಿಯೇಶನ್ ರಾಜ್ಯ ಮತ್ತು ಅಧೀನ ಘಟಕಗಳ ವತಿಯಿಂದ  ನಡೆಯಲಿರುವ ಸಮುದಾಯ ಜಾಗ್ರತಿ ಅಭಿಯಾನ ಇದರ ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭ ಪಡೀಲ್ ಇಲ್ಮ್ ಸೆಂಟರಿನಲ್ಲಿ ನಡೆಯಿತು.

ಪುಂಡೂರು ಇಬ್ರಾಹಿಂ ಸಖಾಫಿ ದುಆ ನೆರವೇರಿಸಿದರು. ಎಸ್ ಜೆ ಎಂ ರಾಜ್ಯಾಧ್ಯಕ್ಷರಾದ ಜೆಪ್ಪು ಅಬ್ದುಲ್ ರಹ್ಮಾನ್ ಮದನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಎಪ್ರಿಲ್ 22 ರಂದು ನಡೆಯಲಿರುವ ಬ್ರಹತ್ ಲೀಡರ್ಸ್ ಮೀಟ್ ಮತ್ತು ಸುನ್ನೀ ಮ್ಯಾನೇಜ್ಮೆಂಟ್ ಎಸೋಸಿಯೇಶನ್ ರಾಜ್ಯ ಮತ್ತು ಅಧೀನ ಘಟಕಗಳ ವತಿಯಿಂದ ಸಮುದಾಯ ಜಾಗೃತಿ ಅಭಿಯಾನದ ಅಂಗವಾಗಿ ನಿಗದಿತ ದಿನಾಂಕಗಳಲ್ಲಿ ನಡೆಸಲ್ಪಡುವ ಕಮ್ಯೂನಿಟಿ ಟಾಕ್,  ಸಮುದಾಯದ ಸ್ಥಿತಿಗತಿಗಳ ಬಗ್ಗೆ ಅವಲೋಕಿಸುವ ಕಮ್ಯೂನಿಟಿ ಡಿಬೇಟ್, ಕಮ್ಯೂನಿಟಿ ಕಾಂಫರೆನ್ಸ್ ಮತ್ತು ಸಮಾರೋಪ ಸಮಾರಂಭ ಯಶಸ್ವಿಗೊಳಿಸಲು ಕರೆ ನೀಡಿದರು.

ಎಸ್ ಎಂ ಎ ರಾಜ್ಯ ಉಪಾಧ್ಯಕ್ಷರಾದ ಹಮೀದ್ ಹಾಜಿ ಕೊಡುಂಗಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಸಭೆಯಲ್ಲಿ ಸಮುದಾಯ ಜಾಗ್ರತಿ ಅಭಿಯಾನದ ಉದ್ಘಾಟನಾ ಸಮಾರಂಭದ ಪೋಸ್ಟರ್ ಮತ್ತು ಮೇ 08, ಶುಕ್ರವಾರ ಎಸ್ ಎಂ ಎ ಹಮ್ಮಿಕೊಂಡ ಮದ್ರಸ ಡೇ ಎಂಬ ವಿಶೇಷ ಕಾರ್ಯಕ್ರಮದ ಪೋಸ್ಟರ್ ಪ್ರದರ್ಶಿಸಲಾಯಿತು.

ಸಭೆಯಲ್ಲಿ ಬ್ರಹತ್ ಲೀಡರ್ಸ್ ಮೀಟ್ ಇದರ ನಿರ್ವಹಣಾ ಸಮಿತಿಯನ್ನು ಆರಿಸಲಾಯಿತು.
ಚೇರ್ಮಾನಾಗಿ ಹಮೀದ್ ಹಾಜಿ ಕೊಡುಂಗಾಯಿ, ಚೀಫ್ ಕನ್ವೀನರಾಗಿ ಇಬ್ರಾಹೀಂ ನಈಮಿ ಇವರನ್ನು ಆಯ್ಕೆ ಮಾಡಲಾಯಿತು. 
ಅಬ್ಬಾಸ್ ಸೆರ್ಕಳ, ಅನ್ಸಾರ್ ಕ್ರಷ್ಣಾಪುರ, ಎಂ ಬಿ ಮುಹಮ್ಮದ್ ಸ್ವಾದಿಖ್ ಮಲೆಬೆಟ್ಟು, ಇಸ್ಮಾಯೀಲ್ ವೇಣೂರು, ಆಲಿಕುಞ್ಞಿ ಮೋಂಟುಗೋಳಿ, ರಝ್ಝಾಖ್ ಹಾಜಿ ಮುಕ್ಕ, ಅಬೂಬಕರ್ ಹಂದಾನಿ, ಯಾಕೂಬ್ ಲತ್ವೀಫಿ, ಹಮೀದ್ ಸಅದಿ ಮೂರುಗೋಳಿ, ಅಕ್ಬರ್ ಅಲಿ ಮದನಿ, ಇಬ್ರಾಹಿಮ್ ಸಖಾಫಿ ಕಬಕ, ನವಾಝ್ ಸಖಾಫಿ ಉಳ್ಳಾಲ, ರಫೀಖ್ ಝುಹ್ರಿ, ಹನೀಫ್ ಸಅದಿ, ರಝ್ಝಾಖ್ ಸಖಾಫಿ ಕೊಳಕೆ, ಫಾರೂಕ್ ಶೇಡಿಗುರಿ ಮತ್ತು ನೌಫಲ್ ಅಹ್ಸನಿ ಪಕ್ಷಿಕೆರೆ ಇವರುಗಳನ್ನು ಸದಸ್ಯರುಗಳಾಗಿ ಆರಿಸಲಾಯಿತು.

ಪ್ರಸ್ತುತ ಸಭೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರು, ದಕ್ಷಿಣ ಕನ್ನಡ ಈಸ್ಟ್ ವೆಸ್ಟ್ ಸೌತ್ ಜಿಲ್ಲಾ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಹಾಗು ಸುನ್ನೀ ಮ್ಯಾನೇಜ್ಮೆಂಟ್ ಎಸೋಸಿಯೇಶನ್ ಎಸ್ ಎಂ ಎ ಪದಾಧಿಕಾರಿಗಳು, ಇತರ ಜಿಲ್ಲೆಗಳ ಪಿ ಎಸ್ ಟಿ ಗಳು ಉಪಸ್ಥಿತರಿದ್ದರು. ಇಬ್ರಾಹಿಂ ನಯೀಮಿ ವಂದಿಸಿದರು.

Comments

Popular posts from this blog

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ( ಎಸ್ ಜೆ ಎಂ ) ದ.ಕ ಜಿಲ್ಲಾ ವೆಸ್ಟ್ ಮಹಾಸಭೆ. ನೂತನ ಪದಾಧಿಕಾರಿಗಳ ಆಯ್ಕೆ

ಸಮಸ್ತ ಸೆಂಟಿನರಿ ಸಂಭ್ರಮದ ಅಂಗವಾಗಿ ನಡೆದ ದ.ಕ.ಜಿಲ್ಲಾ ಮುಅಲ್ಲಿಂ ಸಮ್ಮೇಳನ

ದೇಶ ವಿದೇಶಗಳಲ್ಲಿ ಏಕಕಾಲದಲ್ಲಿ ನಡೆದ ಸ್ಮಾರ್ಟ್ ಸ್ಕಾಲರ್‌ಶಿಪ್ ಮುಖ್ಯ ಪರೀಕ್ಷೆ