Posts

Showing posts from March, 2026

ಬದ್ರುಲ್ ಹುದಾ ಹೈಯರ್ ಸೆಕೆಂಡರಿ ಮದ್ರಸ ಇರಾ ಮೂಲೆ ಮದ್ರಸ ಫತ್ಹೇ ಮುಬಾರಕ್

Image
ಇರಾ:ಕರ್ನಾಟಕದ್ಯಂತ ಮದ್ರಸಾಗಳಲ್ಲಿ ಜರುಗಿರುವ ಫತ್ಹೇ ಮುಬಾರಕ್ ಬದ್ರುಲ್ ಹುದಾ ಹೈಯರ್ ಸೆಕೆಂಡರಿ ಮದ್ರಸ ಇರಾ ಮೂಲೆಯಲ್ಲಿಯೂ ಅತೀ ಪ್ರೌಢವಾಗಿ 29/03/26 ಭಾನುವಾರದಂದು ನಡೆಯಿತು.  ಜಮಾಅತ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿಯವರ ಅಧ್ಯಕ್ಷತೆಯಲ್ಲಿ ಜರುಗಿತು.  ಬದ್ರ್ ಶುಹದಾಗಳನ್ನು ಸ್ಮರಿಸಿ  ದುಆ ಕ್ಕೆ ನೇತೃತ್ವ ನೀಡಿದ ಖತೀಬ್ ಉಸ್ತಾದ್ ಯಾಕೂಬ್ ಲತೀಫಿ ಸಭೆಯನ್ನು ಉದ್ಘಾಟನೆ ನಿರ್ವಹಿಸಿ,ಇಲ್ಮಿನ ಶ್ರೇಷ್ಠತೆ, ಪ್ರಾಧಾನ್ಯತೆಯ ಬಗ್ಗೆ ಅರಿವು ಮೂಡಿಸಿದರು.  ನಂತರ ಮಾತಾಡಿದ ಸದರ್ ಉಸ್ತಾದ್ ಝೈನುಲ್ ಆಬಿದ್ ನಈಮಿ ಮದ್ರಸಾ ನಿಯಮಾವಳಿಗಳನ್ನು  ರಕ್ಷಕರಿಗೂ ಮಕ್ಕಳಿಗೂ ಜಾಗೃತಿ ಮೂಡಿಸಿದರು. ಜೊತೆಗೆ ಸ್ವಾಗತ ಭಾಷಣದಲ್ಲಿ ಮಾತಾಡಿದ ಮುಅಲ್ಲಿಂ ನುಅ್-ಮಾನ್ ಸಅದಿ ಉಸ್ತಾದ್ ಮದ್ರಸಾದ ಅವಶ್ಯಕತೆ ಬಗ್ಗೆ ಮಾತಾಡಿದರು. ವೇದಿಕೆಯಲ್ಲಿದ್ದ ಜಮಾಅತ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಖಾಫಿ ಮತ್ತು ದಫ್ ಉಸ್ತಾದ್ ವೇದಿಕೆ ಗೆ ಶುಭ ಹಾರೈಸಿದರು. ನಾಡಿನ ಗಣ್ಯಾತೀತ ವ್ಯಕ್ತಿಗಳು ರಕ್ಷಕರು ಸಭೆಯಲ್ಲಿದ್ದರು.ಮದ್ರಸಕ್ಕೆ ಹೊಸದಾಗಿ ಸೇರಿದ ಮಕ್ಕಳಿಗೆ ಕೈಯಲ್ಲಿ ಅಲಿಫ್ ಅಕ್ಷರ ಬರೆಸಿ.ಕಿತಾಬ್ ವಿತರಿಸಿ, ಸಿಹಿ ತಿಂಡಿಗಳನ್ನು ಹಂಚಿ ಮೂರು ಸ್ವಲಾತ್ನೊಂದಿಗೆ ಸಭೆ ಕೊನೆಗೊಳಿಸಿತು

ಫತ್ಹೇ ಮುಬಾರಕ್ ನೊಂದಿಗೆ ಅಕ್ಷರ ಲೋಕಕ್ಕೆ ಗ್ರ್ಯಾಂಡ್ ಎಂಟ್ರಿ

Image
✍️ ಸಬಾಹ್ ಸಖಾಫಿ ಅಲ್ ಹಿಮಮಿ (ಪ್ರ. ಕಾರ್ಯದರ್ಶಿ, SJM ಪಾಲಿಬೆಟ್ಟ ರೇಂಜ್) ಮದ್ರಸಾ, ಅಕ್ಷರ ಲೋಕದ ಮೊದಲ ಹೆಜ್ಜೆ. ಓರ್ವ ವಿದ್ಯಾರ್ಥಿಯ ಧಾರ್ಮಿಕ ವಿದ್ಯಾರ್ಜನೆಯ ಅಧಿಕೃತ ಚಾಲನೆ ಮದ್ರಸಾ ವಿದ್ಯಾಭ್ಯಾಸದೊಂದಿಗೆಯಾಗಿದೆ. ಅಧಿಕೃತಕ್ಕಿಂತ ಮೊದಲೇ ವಿದ್ಯಾರ್ಜನೆಗೈಯ್ಯಬೇಕು‌. Mother is the first and best teacher ಎಂಬಂತೆ ತಾಯಿ(ತಂದೆ) ತನ್ನ ಮಗುವಿಗೆ ಅವನ(ಳ) ಬುದ್ಧಿ ಸಾಮರ್ಥ್ಯಕ್ಕೆ ತಕ್ಕಂತೆ ವಿದ್ಯೆ ಹೇಳಿಕೊಡಬೇಕು. ತೊಟ್ಟಿಲ್ ಮುದಲ್ ಕಟ್ಟಿಲ್ ವರೇ ಎಂಬ ಮಲಯಾಳಿ ವಾಕ್ಯ ಇಲ್ಲಿಗೆ ಸೂಕ್ತ. ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಅಧೀನದ 10,000+ ಮದ್ರಸಾಗಳಲ್ಲಿ 2026-27ನೇ ಸಾಲಿನ ಅಧ್ಯಯನ ವರ್ಷ ಮಾರ್ಚ್ 29 ಫತ್ಹೇ ಮುಬಾರಕ್ ನೊಂದಿಗೆ ರಾಜ್ಯ-ರಾಷ್ಟ್ರದಾದ್ಯಂತ ನಡೆಯಲಿದೆ. ಈ ವಿದ್ಯಾಭ್ಯಾಸ ಚಳವಳಿಗೆ ನೇತೃತ್ವ ನೀಡಿದ ಮಹಾನ್ ನಾಯಕ ನೂರುಲ್ ಉಲಮಾ ಎಂ.ಎ ಉಸ್ತಾದ್. ಅಲ್ಲಾಹು ಅವರ ದರಜ ಉನ್ನತಿಗೇರಿಸಲಿ, ಆಮೀನ್. ಅವರ ಅಂದಿನ ದೂರದೃಷ್ಟಿಯ ಫಲವನ್ನು ನಾವು ಈಗ ಸಂತಸದಿಂದ ಅನುಭವಿಸುತ್ತಿದ್ದೇವೆ. ಸಮಕಾಲೀನ ಸನ್ನಿವೇಶದಲ್ಲಿ ಜಗತ್ತಿನಾದ್ಯಂತ ಇಷ್ಟು ಸಿಸ್ಟಮ್ಯಾಟಿಕ್ ಆಗಿ ನಡೆಯುವ ಮತ್ತೊಂದು ಸಂಸ್ಥೆ(ಬೋರ್ಡ್) ಸರಕಾರಕ್ಕೂ ತೋರಿಸಲು ಸಾಧ್ಯವಿಲ್ಲ. ಮದ್ರಸಾ ಸಿಲಬಸ್, ಪಠ್ಯ ಪುಸ್ತಕ, ಕ್ಲಾಸ್ ರೂಂ ನಿರ್ವಹಣೆ, ಸ್ಮಾರ್ಟ್ ಕ್ಲಾಸ್, ಪ್ರಾಕ್ಟಿಕಲ್ ಕ್ಲಾಸ್, ತರಗತಿ ವಿಂಗಡನೆ, ಜನರಲ್ ಮತ್ತು ಪಬ್ಲಿಕ್ ಪರೀಕ್ಷೆಗಳು, ಸ್ಕಾಲರ್ಶ...