ಫತ್ಹೇ ಮುಬಾರಕ್ ನೊಂದಿಗೆ ಅಕ್ಷರ ಲೋಕಕ್ಕೆ ಗ್ರ್ಯಾಂಡ್ ಎಂಟ್ರಿ
✍️ ಸಬಾಹ್ ಸಖಾಫಿ ಅಲ್ ಹಿಮಮಿ
(ಪ್ರ. ಕಾರ್ಯದರ್ಶಿ, SJM ಪಾಲಿಬೆಟ್ಟ ರೇಂಜ್)
ಮದ್ರಸಾ, ಅಕ್ಷರ ಲೋಕದ ಮೊದಲ ಹೆಜ್ಜೆ. ಓರ್ವ ವಿದ್ಯಾರ್ಥಿಯ ಧಾರ್ಮಿಕ ವಿದ್ಯಾರ್ಜನೆಯ ಅಧಿಕೃತ ಚಾಲನೆ ಮದ್ರಸಾ ವಿದ್ಯಾಭ್ಯಾಸದೊಂದಿಗೆಯಾಗಿದೆ. ಅಧಿಕೃತಕ್ಕಿಂತ ಮೊದಲೇ ವಿದ್ಯಾರ್ಜನೆಗೈಯ್ಯಬೇಕು. Mother is the first and best teacher ಎಂಬಂತೆ ತಾಯಿ(ತಂದೆ) ತನ್ನ ಮಗುವಿಗೆ ಅವನ(ಳ) ಬುದ್ಧಿ ಸಾಮರ್ಥ್ಯಕ್ಕೆ ತಕ್ಕಂತೆ ವಿದ್ಯೆ ಹೇಳಿಕೊಡಬೇಕು. ತೊಟ್ಟಿಲ್ ಮುದಲ್ ಕಟ್ಟಿಲ್ ವರೇ ಎಂಬ ಮಲಯಾಳಿ ವಾಕ್ಯ ಇಲ್ಲಿಗೆ ಸೂಕ್ತ. ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಅಧೀನದ 10,000+ ಮದ್ರಸಾಗಳಲ್ಲಿ 2026-27ನೇ ಸಾಲಿನ ಅಧ್ಯಯನ ವರ್ಷ ಮಾರ್ಚ್ 29 ಫತ್ಹೇ ಮುಬಾರಕ್ ನೊಂದಿಗೆ ರಾಜ್ಯ-ರಾಷ್ಟ್ರದಾದ್ಯಂತ ನಡೆಯಲಿದೆ.
ಈ ವಿದ್ಯಾಭ್ಯಾಸ ಚಳವಳಿಗೆ ನೇತೃತ್ವ ನೀಡಿದ ಮಹಾನ್ ನಾಯಕ ನೂರುಲ್ ಉಲಮಾ ಎಂ.ಎ ಉಸ್ತಾದ್. ಅಲ್ಲಾಹು ಅವರ ದರಜ ಉನ್ನತಿಗೇರಿಸಲಿ, ಆಮೀನ್. ಅವರ ಅಂದಿನ ದೂರದೃಷ್ಟಿಯ ಫಲವನ್ನು ನಾವು ಈಗ ಸಂತಸದಿಂದ ಅನುಭವಿಸುತ್ತಿದ್ದೇವೆ. ಸಮಕಾಲೀನ ಸನ್ನಿವೇಶದಲ್ಲಿ ಜಗತ್ತಿನಾದ್ಯಂತ ಇಷ್ಟು ಸಿಸ್ಟಮ್ಯಾಟಿಕ್ ಆಗಿ ನಡೆಯುವ ಮತ್ತೊಂದು ಸಂಸ್ಥೆ(ಬೋರ್ಡ್) ಸರಕಾರಕ್ಕೂ ತೋರಿಸಲು ಸಾಧ್ಯವಿಲ್ಲ. ಮದ್ರಸಾ ಸಿಲಬಸ್, ಪಠ್ಯ ಪುಸ್ತಕ, ಕ್ಲಾಸ್ ರೂಂ ನಿರ್ವಹಣೆ, ಸ್ಮಾರ್ಟ್ ಕ್ಲಾಸ್, ಪ್ರಾಕ್ಟಿಕಲ್ ಕ್ಲಾಸ್, ತರಗತಿ ವಿಂಗಡನೆ, ಜನರಲ್ ಮತ್ತು ಪಬ್ಲಿಕ್ ಪರೀಕ್ಷೆಗಳು, ಸ್ಕಾಲರ್ಶಿಪ್ ಪರೀಕ್ಷೆಗಳು, ಪ್ರಶ್ನೋತ್ತರ ಪತ್ರಿಕೆಗಳು, ಪರೀಕ್ಷೆಗಳಿಗೆ ಇನ್ವಿಜಿಲೇಟರ್ ಗಳು, ಸೂಪರ್ ವೈಸ್ ಗಳು, ಸೂಪರೆಂಡೆಂಟ್ ಗಳು.., ಹೀಗೆ ಇತ್ಯಾದಿಗಳೆಲ್ಲವೂ ಒಂದು ವೆಬ್‌ಸೈಟ್ ಮುಖಾಂತರ ಬೋರ್ಡ್ ನ ಒಂದು ಡೆಡಿಕೇಟಡ್ ಟೀಂ ಜಾಗತಿಕ ಮಟ್ಟದಲ್ಲಿ ಇವೆಲ್ಲವನ್ನೂ ನಿಯಂತ್ರಿಸುತ್ತಿದೆ.
ಒಂದೂರಿನಲ್ಲಿ ಒಂದು ಮದ್ರಸಾ, ಮದ್ರಸಾದ ವಿದ್ಯಾರ್ಥಿಗಳ ಸಂಖ್ಯೆಗೆ ಸರಿಯಾಗಿ ಮುಅಲ್ಲಿಮರು. ಮುಅಲ್ಲಿಮರ ಪೈಕಿ ಓರ್ವರು ಸದರ್ ಮುಅಲ್ಲಿಂ. Inspection ನಡೆಸಲು ಮುಫತ್ತಿಷ್ ಗಳು. ಮುಅಲ್ಲಿಮರದ್ದೇ ಸಂಘಟನೆಯಾದ SJM. ರೇಂಜ್, ಜಿಲ್ಲೆ, ರಾಜ್ಯ, ರಾಷ್ಟ ಮಟ್ಟಗಳಲ್ಲಿ ಆಯಾ ಸಮಿತಿಗಳು. ವಿದ್ಯಾರ್ಥಿಗಳ ಏಳಿಗೆಗಾಗಿ SBS. ವಿದ್ಯೆಯೊಂದಿಗೆ extra curricular activities. ಭಾಷಣ, ಬರಹ, ಹಾಡು ಇತ್ಯಾದಿಗಳ traing homeಗಳಾಗಿರುವ ಸಾಹಿತ್ಯ ಸಮಾಜ ವೇದಿಕೆಯಾದ ಮುಹಾಳರಾ ಗಳು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳ ಒಳ್ಳೆಯ ಸ್ವಭಾವ, ಗುಣ-ನಡತೆಗಳ ಸಂಪೂರ್ಣತೆ ಇಲ್ಲಿಂದ ಮಾತ್ರ ಸಾಧ್ಯ. 10,000+ ಮದ್ರಸಾಗಳಲ್ಲಿ ಒಂದೇ ಸಿಲಬಸ್ ನ ಪಠ್ಯ ಪುಸ್ತಕಗಳು. ಈ ವೈಶಿಷ್ಟ್ಯತೆ ಹೇಳಲು ಮತ್ಯಾರಿಗೆ ಅವಕಾಶವಿದೆ?
ಇದು ಅಹಂ ಅಲ್ಲ. ಸಾಧನೆ ಮಾಡಿ ಮುಗಿಸಿದ ಧೀರ ಚರಿತ್ರೆ. ಈಗಲೂ ಈ ಪಥ ಸಂಚರಿಸುತ್ತಲೇ ಇದೆ. ಪಠ್ಯ ಪುಸ್ತಕಗಳಲ್ಲಿ ಧಾರ್ಮಿಕ ವಿದ್ಯಾರ್ಜನೆಗೆ ಜಾಸ್ತಿ ಒತ್ತು ನೀಡುವುದರೊಂದಿಗೆ ಸಾಮಾಜಿಕ ವಿಷಯಗಳನ್ನೂ ಒಳಗೊಂಡಿದೆ. ಮದ್ರಸಾದ 4ನೇ ತರಗತಿಯ ಪಠ್ಯ ಪುಸ್ತಕದಲ್ಲಿನ ಟ್ರಾಫಿಕ್ ನಿಯಮಗಳ ವಿವರ ರಾಷ್ಟ್ರದಾದ್ಯಂತ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿತ್ತು. ಇದೊಂದು ಉದಾಹರಣೆ ಮಾತ್ರ. ಹೇಳಲಿಕ್ಕೆ ಇನ್ನೂ ಹಲವು ಇವೆ. ಅಂದು ಸೋಷಿಯಲ್ ಮೀಡಿಯಾಗಳಲ್ಲಿನ ಚರ್ಚೆಗಳ ಪೈಕಿ ಓರ್ವರ ಕಮೆಂಟ್ ಹೀಗಿತ್ತು. "ಈ ಅಪ್ಡೇಶನ್ ಕಾಲದ ಬೇಡಿಕೆಯಾಗಿದೆ. ಭಾರತದಾದ್ಯಂತ ಕ್ರಾಂತಿಕಾರಿ ಬದಲಾವಣೆಗಳು ಮತ್ತು ಏಳಿಗೆಗಳು ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ನೇತೃತ್ವದಲ್ಲಿ ನಡೆಯುತ್ತಿರುವುದು ಸರ್ವರಿಗೂ ಉಪಯುಕ್ತವಾದದ್ದು" ಎಂದಾಗಿತ್ತು ಅದು.
ಕೊನೆಯದಾಗಿ.., ಪೋಷಕರೊಂದಿಗೆ. ನಶ್ವರ ಬಾಳು ಇದು. ಅಲ್ಲಾಹು ನೀಡಿದ ಅನುಗ್ರಹಗಳ ಪೈಕಿ ದೊಡ್ಡದಾದ ಅನುಗ್ರಹವಾಗಿದೆ ನಮ್ಮ ಮಕ್ಕಳು. ಅವರು ದ್ವಿಲೋಕದಲ್ಲೂ ನಮಗೆ ಉಪಕಾರ ಸಿಗಬೇಕಾದವರು. ಸಮಕಾಲೀನ ಪ್ರಪಂಚದ ನಾಚಿಕೆಗೇಡಿನ ವಿವರಣೆಯ ಅಗತ್ಯತೆ ಖಂಡಿತ ಇಲ್ಲ. ನಮ್ಮ ಕಣ್ಣ ಮುಂದೆ ಏನೇನೋ ಕಾಣುತ್ತಿದೆ. ಎಲ್ಲವೂ ಧಾರ್ಮಿಕತೆಯ ಕೊರತೆಯಿಂದ. ಧಾರ್ಮಿಕ ವಿದ್ಯಾರ್ಜನೆಯಿಲ್ಲದ ಕಾರಣದಿಂದ. silly reasonಗಳಿಗಾಗಿ, SSLC-PUC ಎಂಬ ನೆಪಗಳಲ್ಲಿ ಮದ್ರಸಾ ಮೊಟಕುಗೊಳಿಸಿದರೆ ಅದರ ದುರ್ಫಲ ನಾವೇ ಅನುಭವಿಸಬೇಕಾದೀತು. ಪೋಷಕರೇ.., ನಮ್ಮ ಮಕ್ಕಳು ನಮ್ಮವರಾಗಬೇಕೇ ಹೊರತು ಯಾವುದೋ ದುಷ್ಚಟಗಳಿಗೆ ಬಲಿಯಾಗಬೇಕಾದವರಲ್ಲ. ಎಲ್ಲಾ ಮುಅಲ್ಲಿಮರು ಶ್ರಮಸಿವುದು ತನ್ನ ಮುಂದೆ ಕುಳಿತಿರುವ ಎಲ್ಲಾ ವಿದ್ಯಾರ್ಥಿಗಳ ಬಾಳು ಬೆಳಗಬೇಕು ಎಂದಾಗಿದೆ. ಮಕ್ಕಳ ಮುಖಾಂತರ ತಾಯಿ-ತಂದೆಗೆ ಯಾವ ಪ್ರತಿಫಲ ಸಿಗುತ್ತದೆಯೋ ಅದೇ ಪ್ರತಿಫಲ ಮುಅಲ್ಲಿಮರೂ ಆಗ್ರಹಿಸುತ್ತಾರೆ. ನಮ್ಮ ಮಕ್ಕಳು ನಮಗೆ ಉಪಕಾರವುಳ್ಳವರಾಗಲಿ, ಆಮೀನ್.
Comments
Post a Comment