ಸಮಸ್ತ ಸೆಂಟಿನರಿ ಸಂಭ್ರಮದ ಅಂಗವಾಗಿ ನಡೆದ ದ.ಕ.ಜಿಲ್ಲಾ ಮುಅಲ್ಲಿಂ ಸಮ್ಮೇಳನ


ಸಮಸ್ತ ಸೆಂಟಿನರಿ ಅಂಗವಾಗಿ ನಡೆಯುವ ಜಿಲ್ಲಾ ಮುಅಲ್ಲಿಂ ಸಮ್ಮೇಳನದ ಕರ್ನಾಟಕ ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭವು ದ.ಕ.ಜಿಲ್ಲಾ ಈಸ್ಟ್,ವೆಸ್ಟ್,ಸೌತ್ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಪುರಭವನದಲ್ಲಿ ನಡೆಯಿತು.


ಎಸ್.ಜೆ.ಎಂ.ಕರ್ನಾಟಕ ರಾಜ್ಯಾಧ್ಯಕ್ಷ ಜೆಪ್ಪು ಅಬ್ದುರ್ರಹ್ಮಾನ್ ಮದನಿ ಸಭಾಧ್ಯಕ್ಷತೆ ವಹಿಸಿದರು.ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ತೆನ್ನಲ ಅಬೂಹನೀಫಲ್ ಫೈಝಿ ಸಭೆಯನ್ನು ಉದ್ಘಾಟಿಸಿದರು. ಅಮೀನುಶ್ಶರೀಅ ಸಯ್ಯಿದ್ ಅಲೀ ಬಾಫಖೀ ತಂಙಳ್ ಪ್ರಾರ್ಥನೆಗೆ ನೇತೃತ್ವ ನೀಡಿದರು. ವಿ.ಪಿ.ಎಂ.ಫೈಝಿ ವಿಲ್ಯಾಪಳ್ಳಿ, ವಿದ್ಯಾಭ್ಯಾಸ ಬೋರ್ಡ್ ಕಾರ್ಯದರ್ಶಿ ಪ್ರೊಫೆಸರ್ ಎ.ಕೆ. ಅಬ್ದುಲ್ ಹಮೀದ್ ಸಾಹಿಬ್, ಸಿ.ಪಿ.ಸೈದಲವಿ ಮಾಸ್ಟರ್ ಚೆಂಙ್ಙರ, ಉಮರ್ ಮದನಿ ಪಾಲಕ್ಕಾಡ್, ಎಸ್.ಎಂ.ಎ. ರಾಜ್ಯ ಉಪಾಧ್ಯಕ್ಷ ಕೊಡುಂಗಾಯಿ ಅಬ್ದುಲ್ ಹಮೀದ್ ಹಾಜಿ ಮಾತನಾಡಿದರು.


ಇದೇ ಸಂದರ್ಭದಲ್ಲಿ ಸಮಸ್ತ ಉಪಾಧ್ಯಕ್ಷ ಹಾಗೂ ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಕೋಶಾಧಿಕಾರಿ ಖುದ್ವತುಸ್ಸಾದಾತ್ ಅಸ್ಸಯ್ಯಿದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್, ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷರೂ ಉಡುಪಿ, ಚಿಕ್ಕಮಂಗಳೂರು ಸಂಯುಕ್ತ ಜಮಾಅತ್ ಖಾಝಿಯೂ ದಾರುಲ್ ಇರ್ಶಾದ್ ವಿದ್ಯಾ ಸಂಸ್ಥೆಯ ಶಿಲ್ಪಿಯೂ ಆದ ಝೈನುಲ್ ಉಲಮಾ ಮಾಣಿ ಉಸ್ತಾದ್ , ಜಿ.ಎಂ.ಅಬೂಬಕರ್ ಸುನ್ನೀ ಫೈಝಿ ಪೆರುವಾಯಿ, ಅಬ್ದುರ್ರಹ್ಮಾನ್ ಮುಸ್ಲಿಯಾರ್ ಮೊಗ್ರಾಲ್ ರವರನ್ನು ವಿಶೇಷವಾಗಿ ಸ್ಮರಣಿಕೆ ಹಾಗೂ ನಗದು ನೀಡಿ ಗೌರವಿಸಲಾಯಿತು.


ಸುನ್ನೀ ಮದ್ರ‌ಸ ಶಿಕ್ಷಣ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದ ಮದ್ರಸ ಅಧ್ಯಾಪಕರನ್ನು ಮತ್ತು ಎಸ್.ಜೆ.ಎಂ.ಸಂಘಟನೆಗಾಗಿ ನಿಸ್ವಾರ್ಥ ಸೇವೆಗೈದ ಕೆಲವು ನಾಯಕರನ್ನು "ಮುಅಲ್ಲಿಂ ಅವಾರ್ಡ್" ನೀಡಿ ಗೌರವಿಸಲಾಯಿತು.

ಸಮಸ್ತದ ಆದರ್ಶ ಎಂಬ ವಿಷಯದಲ್ಲಿ ತೋಕೆ ಮುಹಿಯುದ್ದೀನ್ ಕಾಮಿಲ್ ಸಖಾಫಿ, ಅಧ್ಯಾಪನ ಸೇವೆಯಾಗಿದೆ ಎಂಬ ವಿಷಯದಲ್ಲಿ ಕುಂಞಿಕುಳಂ ಸುಲೈಮಾನ್ ಸಖಾಫಿ, ಸಮಸ್ತ ತಂದ ವಿದ್ಯಾಭ್ಯಾಸ ಕ್ರಾಂತಿ ಎಂಬ ವಿಷಯದಲ್ಲಿ ಅಬ್ದುರ್ರಶೀದ್ ಸಖಾಫಿ ಪತ್ತಪಿರಿಯಂ ತರಗತಿ ಮಂಡಿಸಿದರು.


ರಾಜ್ಯ ಎಸ್.ಎಂ.ಎ. ಕೋಶಾಧಿಕಾರಿ ಮುಹಮ್ಮದ್ ಮನ್ಸೂರ್ ಕುಂದಾಪುರ ಕೋಡಿ, ಎಸ್.ಎಂ.ಎ. ದ.ಕ. ವೆಸ್ಟ್ ಜಿಲ್ಲಾಧ್ಯಕ್ಷ ಬಶೀರ್ ಅಹ್ಮದ್ ಪಂಜಿಮೊಗರು, ಎಸ್.ಎಂ.ಎ. ದ.ಕ. ಈಸ್ಟ್ ಜಿಲ್ಲಾಧ್ಯಕ್ಷ ಅಬ್ಬಾಸ್ ಬಟ್ಲಡ್ಕ, ಎಸ್.ಜೆ.ಎಂ.ರಾಜ್ಯ ಕೋಶಾಧಿಕಾರಿ ಎಂ.ಕೆ.ಅಬ್ದುಲ್ ರಶೀದ್ ಸಖಾಫಿ ಮಜೂರು, ರಾಜ್ಯ ಉಪಾಧ್ಯಕ್ಷರಾದ  ಕೆ.ಕೆ.ಎಂ.ಕಾಮಿಲ್ ಸಖಾಫಿ, ಪುಂಡೂರು ಇಬ್ರಾಹಿಂ ಸಖಾಫಿ, ರಾಜ್ಯ ನಾಯಕರಾದ ಒ.ಕೆ. ಸಈದ್ ಮುಸ್ಲಿಯಾರ್, ಸಮ್ಮೇಳನ ನಿರ್ವಹಣಾ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಸಅದಿ ಬೇಂಗಿಲ, ಎ.ಎಂ.ಇಸ್ಮಾಯಿಲ್ ಸಅದಿ ಉರುಮಣೆ, ತೋಟಾಲ್ ಮುಹಿಯದ್ದೀನ್ ಸಅದಿ, ಮುಫತ್ತಿಶ್ ಹಾಫಿಲ್ ಮುಹಮ್ಮದ್ ಹನೀಫ್ ಮಿಸ್ಬಾಹಿ, ಪಿ.ಎಂ.ಇಬ್ರಾಹೀಂ ನಈಮಿ, ಅಬ್ದುಲ್ ಅಝೀಝ್ ನೂರಾನಿ, ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ,  ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಪೀಣ್ಯ ಬಶೀರ್ ಸಅದಿ, ಅಡ್ಯಾರ್ ಪದವು ಇಸ್ಮಾಯಿಲ್ , ಎಸ್.ಎಂ.ಎ.ದ.ಕ.ಈಸ್ಟ್ ಜಿಲ್ಲಾ ಕೋಶಾಧಿಕಾರಿ ಲತೀಫ್ ಅರ್ಲಡ್ಕ ಇಬ್ರಾಹಿಂ ಖಲೀಲ್ ಮಾಲಿಕಿ, ಎಸ್.ವೈ.ಎಸ್. ದ.ಕ. ವೆಸ್ಟ್ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ, ಅಬ್ದುರ್ರಹ್ಮಾನ್ ಸಖಾಫಿ ಚಿಪ್ಪಾರ್, ಅಬ್ದುಲ್ಲಾ ಸಖಾಫಿ ಕೊಡಗು, ಅಬ್ಬಾಸ್ ನಿಝಾಮಿ ಬೆಂಗಳೂರು, ಹನೀಫ್ ಕಾಮಿಲ್ ಸಖಾಫಿ ಹಾಸನ, ಸೈಫುಲ್ಲಾ ಸಖಾಫಿ ಶಿವಮೊಗ್ಗ, ತಾಜುದ್ದೀನ್ ಫಾಲಿಲಿ, ಅಬ್ದುರ್ರಝ್ಝಾಖ್ ಖಾಸಿಮಿ ಉಡುಪಿ, ಸಿರಾಜುದ್ದೀನ್ ಸಖಾಫಿ ಪೀಚಲಾರ್, ಇಬ್ರಾಹಿಂ ಸಖಾಫಿ ಕಬಕ, ಇಬ್ರಾಹಿಂ ಸಖಾಫಿ ಸೆರ್ಕಳ, ಅಶ್ರಫ್ ಇಂದಾದಿ, ನವಾಝ್ ಸಖಾಫಿ ಉಳ್ಳಾಲ, ಯೂನುಸ್ ಇಂದಾದಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಎಸ್.ಜೆ.ಎಂ.ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಂ.ಮುಹಮ್ಮದ್ ಮದನಿ ಸ್ವಾಗತಿಸಿ ಸಮ್ಮೇಳನ ನಿರ್ವಹಣಾ ಸಮಿತಿ ಕನ್ವೀನರ್ ಯಾಖೂಬ್ ಲತೀಫಿ ಧನ್ಯವಾದ ಅರ್ಪಿಸಿದರು.

Comments

Popular posts from this blog

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ( ಎಸ್ ಜೆ ಎಂ ) ದ.ಕ ಜಿಲ್ಲಾ ವೆಸ್ಟ್ ಮಹಾಸಭೆ. ನೂತನ ಪದಾಧಿಕಾರಿಗಳ ಆಯ್ಕೆ

ದೇಶ ವಿದೇಶಗಳಲ್ಲಿ ಏಕಕಾಲದಲ್ಲಿ ನಡೆದ ಸ್ಮಾರ್ಟ್ ಸ್ಕಾಲರ್‌ಶಿಪ್ ಮುಖ್ಯ ಪರೀಕ್ಷೆ