ಬದ್ರುಲ್ ಹುದಾ ಹೈಯರ್ ಸೆಕೆಂಡರಿ ಮದ್ರಸ ಇರಾ ಮೂಲೆ ಮದ್ರಸ ಫತ್ಹೇ ಮುಬಾರಕ್


ಇರಾ:ಕರ್ನಾಟಕದ್ಯಂತ ಮದ್ರಸಾಗಳಲ್ಲಿ ಜರುಗಿರುವ ಫತ್ಹೇ ಮುಬಾರಕ್ ಬದ್ರುಲ್ ಹುದಾ ಹೈಯರ್ ಸೆಕೆಂಡರಿ ಮದ್ರಸ ಇರಾ ಮೂಲೆಯಲ್ಲಿಯೂ ಅತೀ ಪ್ರೌಢವಾಗಿ 29/03/26 ಭಾನುವಾರದಂದು ನಡೆಯಿತು.  ಜಮಾಅತ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿಯವರ ಅಧ್ಯಕ್ಷತೆಯಲ್ಲಿ ಜರುಗಿತು. 
ಬದ್ರ್ ಶುಹದಾಗಳನ್ನು ಸ್ಮರಿಸಿ  ದುಆ ಕ್ಕೆ ನೇತೃತ್ವ ನೀಡಿದ ಖತೀಬ್ ಉಸ್ತಾದ್ ಯಾಕೂಬ್ ಲತೀಫಿ ಸಭೆಯನ್ನು ಉದ್ಘಾಟನೆ ನಿರ್ವಹಿಸಿ,ಇಲ್ಮಿನ ಶ್ರೇಷ್ಠತೆ, ಪ್ರಾಧಾನ್ಯತೆಯ ಬಗ್ಗೆ ಅರಿವು ಮೂಡಿಸಿದರು. 

ನಂತರ ಮಾತಾಡಿದ ಸದರ್ ಉಸ್ತಾದ್ ಝೈನುಲ್ ಆಬಿದ್ ನಈಮಿ ಮದ್ರಸಾ ನಿಯಮಾವಳಿಗಳನ್ನು  ರಕ್ಷಕರಿಗೂ ಮಕ್ಕಳಿಗೂ ಜಾಗೃತಿ ಮೂಡಿಸಿದರು.
ಜೊತೆಗೆ ಸ್ವಾಗತ ಭಾಷಣದಲ್ಲಿ ಮಾತಾಡಿದ ಮುಅಲ್ಲಿಂ ನುಅ್-ಮಾನ್ ಸಅದಿ ಉಸ್ತಾದ್ ಮದ್ರಸಾದ ಅವಶ್ಯಕತೆ ಬಗ್ಗೆ ಮಾತಾಡಿದರು.
ವೇದಿಕೆಯಲ್ಲಿದ್ದ ಜಮಾಅತ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಖಾಫಿ ಮತ್ತು ದಫ್ ಉಸ್ತಾದ್ ವೇದಿಕೆ ಗೆ ಶುಭ ಹಾರೈಸಿದರು.
ನಾಡಿನ ಗಣ್ಯಾತೀತ ವ್ಯಕ್ತಿಗಳು ರಕ್ಷಕರು ಸಭೆಯಲ್ಲಿದ್ದರು.ಮದ್ರಸಕ್ಕೆ ಹೊಸದಾಗಿ ಸೇರಿದ ಮಕ್ಕಳಿಗೆ ಕೈಯಲ್ಲಿ ಅಲಿಫ್ ಅಕ್ಷರ ಬರೆಸಿ.ಕಿತಾಬ್ ವಿತರಿಸಿ, ಸಿಹಿ ತಿಂಡಿಗಳನ್ನು ಹಂಚಿ ಮೂರು ಸ್ವಲಾತ್ನೊಂದಿಗೆ ಸಭೆ ಕೊನೆಗೊಳಿಸಿತು

Comments

Popular posts from this blog

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ( ಎಸ್ ಜೆ ಎಂ ) ದ.ಕ ಜಿಲ್ಲಾ ವೆಸ್ಟ್ ಮಹಾಸಭೆ. ನೂತನ ಪದಾಧಿಕಾರಿಗಳ ಆಯ್ಕೆ

ಸಮಸ್ತ ಸೆಂಟಿನರಿ ಸಂಭ್ರಮದ ಅಂಗವಾಗಿ ನಡೆದ ದ.ಕ.ಜಿಲ್ಲಾ ಮುಅಲ್ಲಿಂ ಸಮ್ಮೇಳನ

ದೇಶ ವಿದೇಶಗಳಲ್ಲಿ ಏಕಕಾಲದಲ್ಲಿ ನಡೆದ ಸ್ಮಾರ್ಟ್ ಸ್ಕಾಲರ್‌ಶಿಪ್ ಮುಖ್ಯ ಪರೀಕ್ಷೆ