ಪವಿತ್ರ ಹಜ್ ಯಾತ್ರೆ ಹೊರಡುತ್ತಿರುವ ಪಿ ಎಂ ಮದನಿ ಉಸ್ತಾದರಿಗೆ ಬೀಳ್ಕೊಡುಗೆ.
ಸುನ್ನತ್ ಜಮಾಅತಿನ ಪ್ರಮುಖ ಸಂಘಟನೆಯಾದ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್ ಜೆ ಎಂ ) ನ ತಳ ಮಟ್ಟದಿಂದ ರಾಜ್ಯ ಮಟ್ಟದವರೆಗೆ ತನ್ನ ಕಾರ್ಯ ಚಟುವಟಿಕೆಯ ಮೂಲಕ ಬೆಳೆದು ಬಂದ ಎಸ್ ಜೆ ಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ಎಂ ಮದನಿ ಪೂಡಲ್ ರವರು ಈ ವರ್ಷದ ಪವಿತ್ರ ಹಜ್ ಯಾತ್ರೆಗೆ ಹೊರಟಿರುತ್ತಾರೆ. ಇವರಿಗೆ ಎಸ್ ಜೆ ಎಂ ದ.ಕ ವೆಸ್ಟ್ ಜಿಲ್ಲಾ ವತಿಯಿಂದ ಪಡೀಲ್ ಇಲ್ಮ್ ಸೆಂಟರಿನಲ್ಲಿ ಶುಭ ಹಾರೈಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವೆಸ್ಟ್ ಜಿಲ್ಲಾಧ್ಯಕ್ಷರಾದ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಖಾಫಿ, ಎಸ್ ಎಂ ಎ ವೆಸ್ಟ್ ಜಿಲ್ಲಾಧ್ಯಕ್ಷರಾದ ಹನೀಫ್ ಸಅದಿ ಮತ್ತು ಜಿಲ್ಲಾ ನಾಯಕರು, ರೇಂಜ್ ನಾಯಕರು ಉಪಸ್ಥಿತರಿದ್ದರು.
Comments
Post a Comment