ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ SJM ಉಳ್ಳಾಲ ರೇಂಜ್ ಆಶ್ರಯದಲ್ಲಿ ನಡೆದ ಮುಅಲ್ಲಿಂ ಕಾಂಫರೆನ್ಸ್


ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ SJM ಉಳ್ಳಾಲ ರೇಂಜ್ ಆಶ್ರಯದಲ್ಲಿ ಮುಅಲ್ಲಿಂ ಕಾಂಫರೆನ್ಸ್ ತೋಟ ಇಶಾಅತುಸ್ಸುನ್ನಃ ಮದ್ರಸ ಸಭಾ ಭವನದಲ್ಲಿ ನಡೆಯಿತು.

ರೇಂಜ್ ಕೋಶಾಧಿಕಾರಿ ವಿ ಎ ಮುಹಮ್ಮದ್ ಸಖಾಫಿ ಉಳ್ಳಾಲ ದುಆ ನೆರವೇರಿಸಿದರು. ಇರ್ಫಾನ್ ಸಅದಿ ಅಳೇಕಲ ಖಿರಾಅತ್ ಪಠಿಸಿ, ಸಭೆಗೆ ಚಾಲನೆ ನೀಡಿದರು.

ರಾಜ್ಯ ಎಂಇಪಿ ತರಬೇತುದಾರ ಯೂನುಸ್ ಇಮ್ದಾದಿ ಅಲ್ ಫುರ್ಖಾನಿ ಸಭೆಯನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ವರದಿಯನ್ನು, ಕೋಶಾಧಿಕಾರಿ ವಿ ಎ ಮುಹಮ್ಮದ್ ಸಖಾಫಿ ಲೆಕ್ಕಪತ್ರ ಮಂಡಿಸಿದರು. ಸಯ್ಯಿದ್ ಮದನಿ ದರ್ಗಾ ಮುಫತ್ತಿಶರಾದ ಹುಸೈನ್ ಸಅದಿ ಹೊಸ್ಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಲಾಲುದ್ದೀನ್ ಮದನಿ ಉಳ್ಳಾಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಾಂಡೇಲ್ ಪಕ್ಕಾ ಮದ್ರಸ ಸದರ್ ಮುಅಲ್ಲಿಮ್ ಅಬ್ದುಲ್ ಖಾದರ್ ಸಅದಿ ಮಾದರಿ ತರಗತಿ ನಡೆಸಿದರು. ಕಲ್ಲಾಪು ಜುಮಾ ಮಸ್ಜಿದ್ ಖತೀಬರಾದ ಶರೀಫ್ ಸಅದಿ ಕಿತಾಬ್ ಪರಿಚಯ ಮಾಡಿದರು.

ಕೆ ಎಂ ಮುಹ್ಯಿದ್ದೀನ್ ಮದನಿ ಸುಂದರಭಾಗ್ ರಜಬಿನ ಸಂದೇಶ ಎಂಬ ವಿಷಯದಲ್ಲಿ ಸಮಗ್ರವಾದ ಪ್ರಬಂಧ ಮಂಡಿಸಿದರು. ರಾಝಿಖ್ ಹನೀಫಿ ಮುಕ್ಕಚೇರಿ ವಾರ್ತಾ ವಾಚಿಸಿದರು.

ಪ್ರಸ್ತುತ ಸಭೆಯಲ್ಲಿ ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ದೇಶ ವಿದೇಶಗಳಲ್ಲಿ ಏಕ ಕಾಲದಲ್ಲಿ ನಡೆಸಿದ ಸ್ಮಾರ್ಟ್ ಸ್ಕಾಲರ್ಶಿಪ್ ಮುಖ್ಯ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನ ಪಡೆದ ಅಳೇಕಲದ ನಜಾತುಸ್ಸಿಬಿಯಾನ್ ಹೈಯರ್ ಸೆಕೆಂಡರಿ ಮದ್ರಸದ +2 ತರಗತಿಯ ವಿದ್ಯಾರ್ಥಿನಿ ಫಾತಿಮ ಮುನೀಬಃಳಿಗೆ ಎಸ್ ಜೆ ಎಂ ಉಳ್ಳಾಲ ರೇಂಜ್ ವತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಕ್ವಿಝ್ ಮಾಸ್ಟರ್ ನವಾಝ್ ಸಖಾಫಿ ಉಳ್ಳಾಲ ಕ್ವಿಝ್ ಸ್ಪರ್ಧೆ ನಡೆಸಿದರು. ಜಾಬಿರ್ ಫಾಳಿಲಿ ಸ್ಪರ್ಧೆಯಲ್ಲಿ ವಿಜೇತರಾಗಿ ಆಯ್ಕೆಯಾದರು.

ಬಶೀರ್ ಮುಸ್ಲಿಯಾರ್ ಹಾಗು ಹುಸೈನ್ ಮದನಿ ಅನ್ನೂರಿ ಪ್ರವಾದಿ ﷺ ರವರ ಮದ್ಹ್ ಆಲಾಪಿಸಿದರು.
ರೇಂಜ್ ಕಾಂಫರೆನ್ಸ್ ನಡೆಸಲು ಸ್ಥಳ ಸೌಕರ್ಯ ನೀಡಿ, ಮುಂಜಾನೆಯ ಚಹಾ, ತಿಂಡಿ, ವಿವಿಧ ನಮೂನೆಯ ನಾಷ್ಟಗಳು, ಬಗೆ ಬಗೆಯ ಕರಿಗಳು, ಹಣ್ಣು ಹಂಪಲುಗಳು ನೀಡಿದ ತೋಟ ಮೊಹಲ್ಲಾದ ಆಡಳಿತಸಮಿತಿ, ಸಹಕರಿಸಿದ ಊರ ಸಹೋದರರು, ತಾಯಂದಿರು. ಅಲ್ಲಿನ ಅಧ್ಯಾಪಕರುಗಳು ಎಲ್ಲರಿಗೂ ಸಭೆಯಲ್ಲಿ ಪ್ರಾರ್ಥಿಸಲಾಯಿತು.

Comments

Popular posts from this blog

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ( ಎಸ್ ಜೆ ಎಂ ) ದ.ಕ ಜಿಲ್ಲಾ ವೆಸ್ಟ್ ಮಹಾಸಭೆ. ನೂತನ ಪದಾಧಿಕಾರಿಗಳ ಆಯ್ಕೆ

ಸಮಸ್ತ ಸೆಂಟಿನರಿ ಸಂಭ್ರಮದ ಅಂಗವಾಗಿ ನಡೆದ ದ.ಕ.ಜಿಲ್ಲಾ ಮುಅಲ್ಲಿಂ ಸಮ್ಮೇಳನ

ದೇಶ ವಿದೇಶಗಳಲ್ಲಿ ಏಕಕಾಲದಲ್ಲಿ ನಡೆದ ಸ್ಮಾರ್ಟ್ ಸ್ಕಾಲರ್‌ಶಿಪ್ ಮುಖ್ಯ ಪರೀಕ್ಷೆ