ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ SJM ಉಳ್ಳಾಲ ರೇಂಜ್ ಆಶ್ರಯದಲ್ಲಿ ನಡೆದ ರೇಂಜ್ ಕಾಂಫರೆನ್ಸ್.ರಸ ಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ದಾರಂದಬಾಗಿಲು ತರ್ಬಿಯತುಲ್ ಅನಾಂ ಮದ್ರಸದ ಮುಅಲ್ಲಿಂ ಜಾಬಿರ್ ಫಾಳಿಲಿ.ಸುಂದರಬಾಗ್ ಜಮಾಅತಿನ ಭರ್ಜರಿ ಅತಿಥಿ ಸತ್ಕಾರಕ್ಕೆ ಮುಅಲ್ಲಿಮರಿಂದ ವ್ಯಾಪಕ ಪ್ರಶಂಶೆ.


ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ SJM ಉಳ್ಳಾಲ ರೇಂಜ್ ಆಶ್ರಯದಲ್ಲಿ ರೇಂಜ್ ಕಾಂಫರೆನ್ಸ್ ಉಳ್ಳಾಲ ಸುಂದರಬಾಗಿನ ಬದ್ರಿಯಾ ಮದ್ರಸ ಆಡಿಟೋರಿಯಂ ನಲ್ಲಿ ಇತ್ತೀಚೆಗೆ ನಡೆಯಿತು.
ಸುಂದರಬಾಗ್ ಮದ್ರಸದ ಮುಖ್ಯೋಪಾಧ್ಯಾಯರಾದ ಕೆ ಎಂ ಮುಹ್ಯಿದ್ದೀನ್ ಮದನಿ ಕಟ್ಟತ್ತಿಲ ದುಆ ನೆರವೇರಿಸಿದರು. ಸುಂದರಬಾಗ್ ಮದ್ರಸ ಮುಅಲ್ಲಿಮರಾದ ಹಾಫಿಝ್ ಮುಹಮ್ಮದ್ ಅಫ್ಳಲ್ ಹಿಮಮಿ ಸಖಾಫಿ ಖಿರಾಅತ್ ಪಠಿಸಿ, ಸಭೆಗೆ ಚಾಲನೆ ನೀಡಿದರು.

ಸುಂದರಬಾಗ್ ಜುಮಾ ಮಸ್ಜಿದ್ ಖತೀಬರಾದ ಎನ್ ಡಿ ಮದನಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ರೇಂಜ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ವರದಿ ಮಂಡಿಸಿದರು. ಕೋಶಾಧಿಕಾರಿ ವಿ ಎ ಮುಹಮ್ಮದ್ ಸಖಾಫಿ ಲೆಕ್ಕಪತ್ರ ಮಂಡಿಸಿದರು. ಸುಂದರಬಾಗ್ ಮಸೀದಿ, ಮದ್ರಸದ ಆಡಳಿತ ಸಮಿತಿಯ ಅಧ್ಯಕ್ಷರಾದ ಆಸಿಫ್, ಪ್ರಧಾನ ಕಾರ್ಯದರ್ಶಿ ಹಂಝ, ಜೊತೆ ಕಾರ್ಯದರ್ಶಿ ರಿಲ್ವಾನ್, ಸದಸ್ಯರಾದ ನೌಶಾದ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.

ಸಭೆಯ ಪ್ರಾರಂಭಕ್ಕೂ ಮುನ್ನ ದಾರಂದಬಾಗಿಲು ತರ್ಬಿಯತುಲ್ ಅನಾಂ ಮದ್ರಸದ ಮುಅಲ್ಲಿಂ ಜಾಬಿರ್ ಫಾಳಿಲಿ ವಿದ್ಯಾರ್ಥಿಗಳಿಗೆ ಮಾದರಿಯುಕ್ತ ತರಗತಿ ನಡೆಸಿದರು. 
ಮುಕ್ಕಚೇರಿ ಅಲ್ ಮುಬಾರಕ್ ಮದ್ರಸದ ಮುಅಲ್ಲಿಮರಾದ ಶರೀಫ್ ಬಾಖವಿ ಕಿತಾಬ್ ಪರಿಚಯ ಮಾಡಿದರು.


ಪಾಂಡೇಲ್ ಪಕ್ಕಾ ಮುಖ್ಯೋಪಾಧ್ಯಾಯರಾದ ಅಬ್ದುಲ್ ಖಾದಿರ್ ಸಅದಿ ಪುಣ್ಯ ನಬಿ ಜನ್ಮ ದಿನದ ವಿಶೇಷತೆಗಳು  ಎಂಬ ವಿಷಯದಲ್ಲಿ ಸಮಗ್ರವಾದ ಪ್ರಬಂಧ ಮಂಡಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಲಾಲುದ್ದೀನ್ ಮದನಿ ಎಸ್ ಜೆ ಎಂ ವತಿಯಿಂದ ನಡೆಸಲ್ಪಡುವ ಎಲ್ಲಾ ಕಾರ್ಯ ಚಟುವಟಿಕೆಯಲ್ಲಿ  ರೇಂಜ್ ಮುಅಲ್ಲಿಮರು ಸಕ್ರಿಯರಾಗಬೇಕೆಂದು ತಿಳಿಸಿದರು.
ಸಯ್ಯಿದ್ ಮದನಿ ಅರೆಬಿಕ್ ಎಜ್ಯುಕೇಶನಲ್ ಟ್ರಸ್ಟ್ ಮುಫತ್ತಿಶರಾದ ಹುಸೈನ್ ಸಅದಿ ಹೊಸ್ಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿ ಮಾತನಾಡಿದರು.

ಆಝಾದ್ ನಗರ ಅನ್ವಾರುಲ್ ಉಲೂಂ ಮದ್ರಸದ ಮುಅಲ್ಲಿಂ ಶಂಸುದ್ದೀನ್ ಮದನಿ ವಾರ್ತಾ ವಾಚಿಸಿದರು. ಕಾರ್ಯಕ್ರಮದಲ್ಲಿ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಕ್ವಿಝ್ ಮಾಸ್ಟರ್ ಬಶೀರ್ ಮುಸ್ಲಿಯಾರ್ ಸೇವಂತಿಗುಡ್ಡೆ ಕ್ವಿಝ್ ಸ್ಪರ್ಧೆ ನಡೆಸಿದರು. ಜಾಬಿರ್ ಫಾಳಿಲಿ ಸ್ಪರ್ಧೆಯಲ್ಲಿ ವಿಜೇತರಾಗಿ ಆಯ್ಕೆಯಾದರು. ಇರ್ಫಾನ್ ಸಅದಿ ಹಾಗು ಜಾಬಿರ್ ಫಾಳಿಲಿ ಪ್ರವಾದಿ ﷺ ರವರ ಮದ್ಹ್ ಆಲಾಪಿಸಿದರು.

ಪ್ರಸ್ತುತ ಸಭೆಯಲ್ಲಿ ರೇಂಜ್ ಅಧೀನದ ಮದ್ರಸಗಳ ಕಳೆದ ವರ್ಷ ಪಬ್ಲಿಕ್ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪ್ರಮಾಣ ಪತ್ರವನ್ನು ಆಯಾ ಮದ್ರಸಗಳ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಲಾಯಿತು.
ರೇಂಜ್ ಕಾಂಫರೆನ್ಸ್ ನಡೆಸಲು ಸ್ಥಳ ಸೌಕರ್ಯ ನೀಡಿ, ಮುಂಜಾನೆಯ ಚಹಾ, ತಿಂಡಿ, ವಿವಿಧ ನಮೂನೆಯ ನಾಷ್ಟಗಳು, ಬಗೆ ಬಗೆಯ ಕರಿಗಳು, ಹಣ್ಣು ಹಂಪಲುಗಳು, ಪಾಲ್ಗೊಂಡ ಮುಅಲ್ಲಿಮರೆಲ್ಲರಿಗೂ ಸುಗಂಧ ದ್ರವ್ಯ, ಹೀಗೆ ಭರ್ಜರಿ ಸತ್ಕಾರ ನೀಡಿ ಮುಅಲ್ಲಿಮರಿಂದ ವ್ಯಾಪಕ ಪ್ರಶಂಶೆಗೊಳಗಾದ ಸುಂದರಬಾಗ್ ಮೊಹಲ್ಲಾದ ಆಡಳಿತ ಸಮಿತಿ, ಸಹಕರಿಸಿದ ಊರ ಸಹೋದರರು, ತಾಯಂದಿರು. ಅಲ್ಲಿನ ಸದರ್ ಮುಅಲ್ಲಿಮ್, ಸಹ ಮುಅಲ್ಲಿಮರು ಎಲ್ಲರಿಗೂ ಸಭೆಯಲ್ಲಿ ಪ್ರಾರ್ಥಿಸಲಾಯಿತು.

ಮುಂದಿನ ರೇಂಜ್ ಕಾಂಫರೆನ್ಸಿನಲ್ಲಿ ಖಿರಾಅತ್ ಮುಸ್ತಫಾ ಸಅದಿ ತೋಟ, ಉದ್ಘಾಟನೆ ಯೂನುಸ್ ಇಮ್ದಾದಿ ಅಲ್ ಫುರ್ಖಾನಿ ತೋಟ, ದುಆ ಶರೀಫ್ ಬಾಖವಿ ಮುಕ್ಕಚೇರಿ, ಮಾದರಿ ತರಗತಿ ನಡೆಸಲು ಜಮಾಲುದ್ದೀನ್ ಮದನಿ ಮಾರ್ಗತಲೆ, ಕಿತಾಬ್ ಪರಿಚಯ ನಡೆಸಲು ವಿ ಕೆ ಅಬ್ದುರ್ರಹ್ಮಾನ್ ಸಖಾಫಿ ಮುಕ್ಕಚೇರಿ, ಪ್ರಬಂಧ ಮಂಡಿಸಲು ಉಸ್ಮಾನ್ ಸಖಾಫಿ ಮಾರ್ಗತಲೆ, ವಾರ್ತಾ ವಾಚಕರಾಗಿ ಅಬ್ದುರ್ರಝ್ಝಾಖ್ ಮದನಿ ದಾರಂದಬಾಗಿಲು, ಕ್ವಿಝ್ ಮಾಸ್ಟರಾಗಿ ವಿ ಎ ಮುಹಮ್ಮದ್ ಸಖಾಫಿ ಉಳ್ಳಾಲ ಆಯ್ಕೆಯಾದರು.

ರೇಂಜ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಇರ್ಫಾನ್ ಸಅದಿ ಅಳೇಕಲ ಧನ್ಯವಾಧಗೈದರು.

Comments

Popular posts from this blog

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ( ಎಸ್ ಜೆ ಎಂ ) ದ.ಕ ಜಿಲ್ಲಾ ವೆಸ್ಟ್ ಮಹಾಸಭೆ. ನೂತನ ಪದಾಧಿಕಾರಿಗಳ ಆಯ್ಕೆ

ಸಮಸ್ತ ಸೆಂಟಿನರಿ ಸಂಭ್ರಮದ ಅಂಗವಾಗಿ ನಡೆದ ದ.ಕ.ಜಿಲ್ಲಾ ಮುಅಲ್ಲಿಂ ಸಮ್ಮೇಳನ

ದೇಶ ವಿದೇಶಗಳಲ್ಲಿ ಏಕಕಾಲದಲ್ಲಿ ನಡೆದ ಸ್ಮಾರ್ಟ್ ಸ್ಕಾಲರ್‌ಶಿಪ್ ಮುಖ್ಯ ಪರೀಕ್ಷೆ