ಎಸ್ ಜೆ ಎಂ ಉಳ್ಳಾಲ ರೇಂಜ್ ವತಿಯಿಂದ ನಡೆದ ಗ್ರ್ಯಾಂಡ್ ಮಾದರಿ ಮೌಲಿದ್ ಮಜ್ಲಿಸ್

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಉಳ್ಳಾಲ ರೇಂಜ್ ವತಿಯಿಂದ ಗ್ರ್ಯಾಂಡ್ ಮಾದರಿ ಮೌಲಿದ್ ಮಜ್ಲಿಸ್ ಉಳ್ಳಾಲದ ಕಲ್ಲಾಪು ಜುಮಾ ಮಸೀದಿಯಲ್ಲಿ ನಡೆಯಿತು.

ಅಳೇಕಲ ಜಾಮಿಉಲ್ ಅಮೀನ್ ಮಸ್ಜಿದ್ ಖತೀಬರಾದ ಅಬೂ ಝಿಯಾದ್ ಮದನಿ ಪಟ್ಟಾಂಬಿ ಉಸ್ತಾದ್ ದುಆ ನೆರವೇರಿಸಿದರು. ಮೌಲಿದ್ ಪಾರಾಯಣದ ನಂತರ ನಡೆದ ಸಭೆಯನ್ನು ಕಲ್ಲಾಪು ಜುಮಾ ಮಸ್ಜಿದ್ ಖತೀಬರಾದ ಶರೀಫ್ ಸಅದಿ ಉದ್ಘಾಟಿಸಿದರು.

ಪಟ್ಲ ತಖ್ವಾ ಜುಮಾ ಮಸ್ಜಿದ್ ಖತೀಬರಾದ ಎಂ ಸಿ ಮುಹಮ್ಮದ್ ಫೈಝಿ ಮೋಙಂ, ಕೋಡಿ ಬದ್ರಿಯಾ ಜುಮಾ ಮಸ್ಜಿದ್ ಖತೀಬರಾದ ಆದಂ ಫೈಝಿ, ಮುಕ್ಕಚೇರಿ ಅಬೂಬಕರ್ ಸಿದ್ದೀಖ್ ಜುಮಾ ಮಸ್ಜಿದ್ ಖತೀಬರಾದ ಶರೀಫ್ ಬಾಖವಿ ಶುಭ ಹಾರೈಸಿ ಮಾತನಾಡಿದರು.


ಎಸ್ ಜೆ ಎಂ ಕರ್ನಾಟಕ ರಾಜ್ಯ ತರಬೇತುದಾರರಾದ ಯೂನುಸ್ ಇಮ್ದಾದಿ ಅಲ್ ಫುರ್ಖಾನಿ ಮಾತನಾಡಿ ಪ್ರಪಂಚ ಸ್ರಷ್ಠಿಯಾದಿಯಿಂದ ಇಹ ಪರಲೋಕದಲ್ಲಿ ಶಾಶ್ವತವಾಗಿ ಮನುಕುಲಕ್ಕೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ ರವರು ಆಸರೆ ಹಾಗು ಮಾದರಿಯಾಗಿದ್ದಾರೆ, ಅವರ ಮೇಲಿನ ಪ್ರೀತಿ, ಅವರು ತೋರಿಸಿದ ಸತ್ಯ, ನ್ಯಾಯ, ಶಾಂತಿ ಸಹಬಾಳ್ವೆ ನಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. 


ಮುಹಮ್ಮದ್ ಇರ್ಫಾನ್ ಸಅದಿ ಅಳೇಕಲ, ಅರ್ಫಾಝ್ ಮದನಿ ಮಿಲ್ಲತ್ ನಗರ, ಹುಸೈನ್ ಮದನಿ ಅನ್ನೂರಿ ಅಳೇಕಲ ಪ್ರವಾದಿ ಪ್ರಕೀರ್ತನಾ ಮದ್ಹ್ ಆಲಾಪಿಸಿದರು. ಎಸ್ ಎಂ ಎ ಇ ಟಿ ಮುಫತ್ತಿಷ್ ಹುಸೈನ್ ಸಅದಿ ಹೊಸ್ಮಾರ್, ಕಾರ್ಯದರ್ಶಿ ಬಶೀರ್ ಸಖಾಫಿ ಉಳ್ಳಾಲ, ಮುಕ್ಕಚೇರಿ ಮುದರ್ರಿಸ್ ಅಬ್ಬಾಸ್ ಮದನಿ , ರೇಂಜ್ ಕೋಶಾಧಿಕಾರಿ ವಿ ಎ ಮುಹಮ್ಮದ್ ಸಖಾಫಿ ಉಳ್ಳಾಲ, ರೇಂಜ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, ಮೌಲಿದ್ ನಿರ್ವಹಣಾ ಸಮಿತಿ ಕನ್ವೀನರ್ ಅಬ್ದುಲ್ ಖಾದರ್ ಸಅದಿ ಪಾಂಡೇಲ್ ಪಕ್ಕಾ,  ಇರ್ಫಾನ್ ಫಾಳಿಲಿ, ಅಬ್ಬಾಸ್ ಮದನಿ ಬಂಡಾಡಿ, ಸೆರ್ಕಳ ಇಬ್ರಾಹಿಂ ಸಖಾಫಿ, ಮುನೀರ್ ಲತೀಫಿ, ಮುಹ್ಯಿದ್ದೀನ್ ಮದನಿ ಸುಂದರಭಾಗ್, ಉಳ್ಳಾಲ ಸಯ್ಯಿದ್ ಮದನಿ ಅರೆಬಿಕ್ ಎಜ್ಯುಕೇಶನಲ್ ಟ್ರಸ್ಟ್ ಅಧೀನದ ಮಸೀದಿ ಮದ್ರಸಗಳ ಮುಖ್ಯೋಪಾಧ್ಯಾಯರು, ಅಧ್ಯಾಪಕರು, ಇಮಾಂ, ಖತೀಬರು ಹಾಗು ವಿವಿಧ ಮೊಹಲ್ಲಾಗಳ ಪ್ರತಿನಿಧಿಗಳು ಪ್ರಸ್ತುತ ಸಭೆಯಲ್ಲಿ ಭಾಗವಹಿಸಿದರು.


ಉಳ್ಳಾಲ ರೇಂಜ್ ಅಧ್ಯಕ್ಷರಾದ ಜಲಾಲುದ್ದೀನ್ ಮದನಿ ಕಾರ್ಯಕ್ರಮ ನಿರೂಪಿಸಿದರು. ಮೌಲಿದ್ ನಿರ್ವಹಣಾ ಸಮಿತಿ ಚೇರ್ಮಾನ್ ವಿ ಕೆ ಅಬ್ದುರ್ರಹ್ಮಾನ್ ಸಖಾಫಿ ಮುಕ್ಕಚೇರಿ ಸ್ವಾಗತಿಸಿದರು.

Comments

Popular posts from this blog

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ( ಎಸ್ ಜೆ ಎಂ ) ದ.ಕ ಜಿಲ್ಲಾ ವೆಸ್ಟ್ ಮಹಾಸಭೆ. ನೂತನ ಪದಾಧಿಕಾರಿಗಳ ಆಯ್ಕೆ

ಸಮಸ್ತ ಸೆಂಟಿನರಿ ಸಂಭ್ರಮದ ಅಂಗವಾಗಿ ನಡೆದ ದ.ಕ.ಜಿಲ್ಲಾ ಮುಅಲ್ಲಿಂ ಸಮ್ಮೇಳನ

ದೇಶ ವಿದೇಶಗಳಲ್ಲಿ ಏಕಕಾಲದಲ್ಲಿ ನಡೆದ ಸ್ಮಾರ್ಟ್ ಸ್ಕಾಲರ್‌ಶಿಪ್ ಮುಖ್ಯ ಪರೀಕ್ಷೆ