ಖುತಬಾ ಸಂಗಮ ಯಶಸ್ವಿಗೊಳಿಸಲು SJM ಶಿವಮೊಗ್ಗ ಜಿಲ್ಲಾ ಸಮಿತಿ ಕರೆ


ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಸಮುದಾಯದ ಮದುವೆ ಸಮಾರಂಭ ಶರೀಅತ್ ಮೀರಿ ಹೋಗುತ್ತಿದ್ದು. ಅನಾಚಾರವೂ ದುಂದುವೆಚ್ಚವೂ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಸ್ ವೈ ಎಸ್ KARNATAKA STATE ನಡೆಸುವ ಮಾದರಿ ಮದುವೆ ಎಂಬ ಶತದಿನ ಅಭಿಯಾನದ ಪ್ರಯುಕ್ತ ಶಿವಮೊಗ್ಗ ಜಿಲ್ಲಾ ಸಮಿತಿ ಡಿಸೆಂಬರ್ 17 ಬುಧವಾರ ಸಾಗರದ ಬದ್ರಿಯಾ ಶಾದೀ ಮಹಲ್ ನಲ್ಲಿ ಖುತಬಾ ಸಂಗಮ ಹಮ್ಮಿಕೊಂಡಿದೆ.
ಎಸ್ ವೈ ಎಸ್ ಜಿಲ್ಲಾಧ್ಯಕ್ಷರಾದ ಅಸ್ಸಯ್ಯಿದ್ ಅಬೂಬಕರ್ ಸಿದ್ದೀಖ್ ಅಲ್ ಹಾದೀ ತಂಙಲ್ ರವರ ನೇತ್ರತ್ವದಲ್ಲಿ ಖ್ಯಾತ ವಿದ್ವಾಂಸ, ವಾಗ್ಮಿ ಚಿಂತಕ ಹಂಝ ಮಿಸ್ಬಾಹಿ ಓಟಪದವು ವಿಷಯ ಮಂಡನೆ ನಡೆಸುವರು.
ಮೊಹಲ್ಲಾಗಳ ಧಾರ್ಮಿಕ ನಾಯಕತ್ವದ ಮುಂಚೂಣಿಯಲ್ಲಿರುವ ಖತೀಬರು, ಇಮಾಮರು, ಸದರ್ ಸಹಿತ ಸರ್ವ ಮುಅಲ್ಲಿಮರು ಈ ವಿಚಾರವಾಗಿ ಹೆಚ್ಚಿನ ಮಾಹಿತಿ ಪಡೆದು ಜನರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಹೊಂದಿರುತ್ತಾರೆ..
ಆ ಮೂಲಕ ಸಮಾಜವನ್ನು ಸರಿದಾರಿಗೆ ತರಲು ಸಾಧ್ಯವಿದೆ
ಪ್ರಸ್ತುತ ಕಾರ್ಯಕ್ರಮದಲ್ಲಿ ನಮ್ಮ ಜಿಲ್ಲಾ ವ್ಯಾಪ್ತಿಯ ಎಲ್ಲಾ ಖತೀಬರು,ಇಮಾಮರು, ಸದರ್ ಉಸ್ತಾದರುಗಳು ಮತ್ತು ಸರ್ವ ಮುಅಲ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಈ ಮೂಲಕ ವಿನಂತಿಸುತ್ತೇವೆ.

ಅಬ್ದುಲ್ ಜಬ್ಬಾರ್ ಸಅದಿ (ಅಧ್ಯಕ್ಷರು)
ಸಿ ಎಸ್ ಮುಹಮ್ಮದ್ ಹನೀಫ್ ಮದನಿ ಬೆಜ್ಜವಳ್ಳಿ (ಪ್ರ.ಕಾರ್ಯದರ್ಶಿ)
ಸೈಫುಲ್ಲಾ ಸಖಾಫಿ ರಿಪ್ಪನ್ ಪೇಟೆ (ಕೋಶಾಧಿಕಾರಿ)
ಮತ್ತು ಸರ್ವ ಸದಸ್ಯರು
SJM ಶಿವಮೊಗ್ಗ ಜಿಲ್ಲಾ ಸಮಿತಿ

Comments

Popular posts from this blog

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ( ಎಸ್ ಜೆ ಎಂ ) ದ.ಕ ಜಿಲ್ಲಾ ವೆಸ್ಟ್ ಮಹಾಸಭೆ. ನೂತನ ಪದಾಧಿಕಾರಿಗಳ ಆಯ್ಕೆ

ಸಮಸ್ತ ಸೆಂಟಿನರಿ ಸಂಭ್ರಮದ ಅಂಗವಾಗಿ ನಡೆದ ದ.ಕ.ಜಿಲ್ಲಾ ಮುಅಲ್ಲಿಂ ಸಮ್ಮೇಳನ

ದೇಶ ವಿದೇಶಗಳಲ್ಲಿ ಏಕಕಾಲದಲ್ಲಿ ನಡೆದ ಸ್ಮಾರ್ಟ್ ಸ್ಕಾಲರ್‌ಶಿಪ್ ಮುಖ್ಯ ಪರೀಕ್ಷೆ