ಎಸ್ ಜೆ ಎಂ ಮುಅಲ್ಲಿಂ ಜಿಲ್ಲಾ ಸಮ್ಮೇಳನ, ರಾಜ್ಯ ಮಟ್ಟದ ಉದ್ಘಾಟನೆ ಇದರ ಸಿದ್ಧತಾ ಸಭೆ
ಮುಅಲ್ಲಿಂ ಜಿಲ್ಲಾ ಸಮ್ಮೇಳನ ನಿರ್ವಹಣಾ ಸಮಿತಿಯ ಸಿದ್ಧತಾ ಸಭೆಯು ಪಡೀಲ್ ಇಲ್ಮ್ ಸೆಂಟರಿನಲ್ಲಿ ನಡೆಯಿತು. ಎಸ್ ಜೆ ಎಂ ರಾಜ್ಯ ಉಪಾಧ್ಯಕ್ಷ ಕೆ ಕೆ ಎಂ ಕಾಮಿಲ್ ಸಖಾಫಿ ದುಆ ನೆರವೇರಿಸಿದರು. ನಿರ್ವಹಣಾ ಸಮಿತಿ ಚೀಫ್ ಕನ್ವೀನರ್ ಯಾಕೂಬ್ ಲತೀಫಿ ಸ್ವಾಗತಿಸಿದರು. ಎಸ್ ಜೆ ಎಂ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ಪ್ರಾಸ್ತಾವಿಕವಾಗಿ ಮಾತನಾಡಿದರು.
ನಿರ್ವಹಣಾ ಸಮಿತಿ ಚೇಯರ್ ಮಾನ್ ಅಬ್ದುಲ್ ಹಮೀದ್ ಸಅದಿ ಮೂರುಗೋಳಿಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಅಲ್ಲಿಂ ಸಮ್ಮೇಳನಕ್ಕೆ ಅಂತಿಮ ರೂಪುರೇಷೆ ನೀಡಲಾಯಿತು.
ಸಮಸ್ತ ಕೇರಳ ಸುನ್ನೀ ಜಂಇಯ್ಯತುಲ್ ಉಲಮಾ ಇದರ ನೂರನೇ ವಾರ್ಷಿಕದ ಪ್ರಯುಕ್ತ ಎಸ್ ಜೆ ಎಂ ದ.ಕ ಜಿಲ್ಲಾ ವೆಸ್ಟ್, ಈಸ್ಟ್, ಸೌತ್ ವತಿಯಿಂದ ಜಿಲ್ಲಾ ಮುಅಲ್ಲಿಂ ಸಮ್ಮೇಳನ ಮತ್ತು ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭವು ಮಂಗಳೂರಿನ ಪುರಭವನದಲ್ಲಿ ಅಕ್ಟೋಬರ್ 14 ರಂದು ನಡೆಯಲಿದೆ. ದ.ಕ ವೆಸ್ಟ್, ಈಸ್ಟ್ ಮತ್ತು ಸೌತ್ ಜಿಲ್ಲಾ ಅಧೀನದ ಮದ್ರಸಗಳ ಸರಿಸುಮಾರು 1500 ಮುಅಲ್ಲಿಮರು ಭಾಗವಹಿಸಲಿದ್ದಾರೆ.
ಎಸ್ ಜೆ ಎಂ ರಾಜ್ಯಾಧ್ಯಕ್ಷರಾದ ಜೆಪ್ಪು ಅಬ್ದುಲ್ ರಹ್ಮಾನ್ ಮದನಿ ಅಧ್ಯಕ್ಷತೆ ವಹಿಸಲಿರುವರು. ಎಸ್ ಜೆ ಎಂ ಕೇಂದ್ರೀಯ ಸಮಿತಿ ಅಧ್ಯಕ್ಷರಾದ ಅಮೀನುಶ್ಶರೀಅಃ ಸಯ್ಯಿದ್ ಬಾಫಖಿ ತಂಙಳ್ ದುಆ ಮಾಡಲಿರುವರು. ಎಸ್.ಜೆ. ಎಂ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಅಬೂ ಹನೀಫಲ್ ಫೈಝಿ ತೆನ್ನಲ ಉದ್ಘಾಟಿಸಲಿರುವರು. ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಕೋಶಾಧಿಕಾರಿ ಖುದ್ವತುಸ್ಸಾದಾತ್ ಕೆ ಎಸ್ ಆಟ್ಟಕೋಯ ತಂಙಳ್ ಕುಂಬೋಲ್, ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಝೈನುಲ್ ಉಲಮಾ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಕಾರ್ಯದರ್ಶಿ ಪ್ರೊ.ಎ.ಕೆ.ಅಬ್ದುಲ್ ಹಮೀದ್ ಸಾಹಿಬ್, ಜನರಲ್ ಮ್ಯಾನೇಜರ್ ಸಿ.ಪಿ ಸೈದಲವಿ ಮಾಸ್ಟರ್, ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕೇಂದ್ರ ಸಮಿತಿಯ ಕೋಶಾಧಿಕಾರಿ ವಿ.ಪಿ.ಎಂ.ಫೈಝಿ ವಿಲ್ಯಾಪಳ್ಳಿ, ಕಾರ್ಯದರ್ಶಿ ಉಮರ್ ಮದನಿ ಪಾಲಕ್ಕಾಡ್ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ಸಮ್ಮೇಳನದಲ್ಲಿ ಮೂರು ಪ್ರಮುಖ ವಿಷಯಗಳಲ್ಲಿ ತರಗತಿ ನಡೆಯಲಿದ್ದು, ತೋಕೆ ಮುಹ್ಯಿದ್ದೀನ್ ಕಾಮಿಲ್ ಸಖಾಫಿ, ಸುಲೈಮಾನ್ ಸಖಾಫಿ ಕುಂಞಿಕುಳಂ, ಅಬ್ದುಲ್ ರಶೀದ್ ಸಖಾಫಿ ಪತ್ತಪಿರಿಯಂ ವಿಷಯ ಮಂಡನೆ ಮಾಡಲಿರುವರು.
ಅಲ್ಲದೆ ಕರ್ನಾಟಕದ 58 ಕ್ಕೂ ಮಿಕ್ಕ ಊರುಗಳಲ್ಲಿ ಮದ್ರಸ ನಿರ್ಮಾಣಕ್ಕೆ ಧನ ಸಹಾಯ ವಿತರಣೆ, ಕಳೆದ 15 ವರ್ಷಗಳಿಂದ ನಿರಂತರವಾಗಿ ಒಂದೇ ಮದ್ರಸದಲ್ಲಿ ಸೇವೆ ಸಲ್ಲಿಸುತ್ತಿರುವ ಮುಅಲ್ಲಿಮರಿಗೆ ಕ್ಯಾಶ್ ಅವಾರ್ಡ್ ಮತ್ತು ಗೌರವಾರ್ಪಣೆ, ಹಿರಿಯ ಸಾದಾತುಗಳಿಗೆ ಮತ್ತು ನಾಯಕರಿಗೆ ಸನ್ಮಾನ ನಡೆಯಲಿದೆ. ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆ ತನಕ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 8 ರಿಂದ 8-30 ತನಕ ಬೆಳಗ್ಗಿನ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ.
ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ಎಂ. ಮುಹಮ್ಮದ್ ಮದನಿ ಪೂಡಲ್, ಎಸ್.ಜೆ.ಎಂ.ವೆಸ್ಟ್ ಜಿಲ್ಲಾಧ್ಯಕ್ಷ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ, ರಾಜ್ಯ ಜೊತೆ ಕಾರ್ಯದರ್ಶಿಗಳಾದ ಅಬ್ದುಲ್ ಅಝೀಝ್ ನೂರಾನೀ, ಇಬ್ರಾಹಿಂ ನಯೀಮಿ, ನಿರ್ವಹಣಾ ಸಮಿತಿ ವೈಸ್ ಚೇಯರ್ ಮಾನ್ ಹಾಫಿಲ್ ಮುಹಮ್ಮದ್ ಹನೀಫ್ ಮಿಸ್ಬಾಹಿ, ವೈಸ್ ಕನ್ವೀನರುಗಳಾದ ಇಸ್ಮಾಯಿಲ್ ಸಅದಿ ಉರುಮಣೆ, ಯೂನುಸ್ ಇಮ್ದಾದಿ ಅಲ್ ಫುರ್ಖಾನಿ, ಸೆರ್ಕಳ ಇಬ್ರಾಹಿಂ ಸಖಾಫಿ, ಚಿಪ್ಪಾರ್ ಅಬ್ದುಲ್ ರಹ್ಮಾನ್ ಸಖಾಫಿ, ಸದಸ್ಯರುಗಳಾದ ಅಶ್ರಫ್ ಇಮ್ದಾದಿ, ಅಬೂಬಕರ್ ಹಂದಾನಿ ಸುಳ್ಯ, ನವಾಝ್ ಸಖಾಫಿ ಉಳ್ಳಾಲ ಉಪಸ್ಥಿತರಿದ್ದರು.
Comments
Post a Comment