ಎಸ್ ಜೆ ಎಂ ಉಳ್ಳಾಲ ರೇಂಜ್ ವಾರ್ಷಿಕ ಕೌನ್ಸಿಲ್
ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಉಳ್ಳಾಲ ರೇಂಜ್ ವಾರ್ಷಿಕ ಕೌನ್ಸಿಲ್ ಆಝಾದ್ ನಗರದ ಅನ್ವಾರುಲ್ ಉಲೂಂ ಮದ್ರಸ ಆಡಿಟೋರಿಯಂ ನಲ್ಲಿ ನಡೆಯಿತು.
ಎಸ್ಎಂಎಇಟಿ ಕಾರ್ಯದರ್ಶಿ ಬಶೀರ್ ಸಖಾಫಿ ಉಳ್ಳಾಲ ದುಆ ನೆರವೇರಿಸಿದರು. ರೇಂಜ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿದರು.
ರೇಂಜ್ ಸಹಾಯಕ ಕಾರ್ಯದರ್ಶಿ ಇರ್ಫಾನ್ ಸಅದಿ ಅಳೇಕಲ ಖಿರಾಅತ್ ಪಠಿಸಿದರು. ದಾರಂದಬಾಗಿಲು ಖತೀಬರಾದ ಹಸನ್ ಜಾಬಿರ್ ಫಾಳಿಲಿ ಮಾತನಾಡಿ ಎಸ್ ಜೆ ಎಂ ಉಳ್ಳಾಲ ರೇಂಜ್ ಈ ಒಂದು ವರ್ಷದ ಅವಧಿಯಲ್ಲಿ ಹಲವು ವೈವಿಧ್ಯ ಕಾರ್ಯ ಚಟುವಟಿಕೆಗಳನ್ನು ನಡೆಸಿದೆ, ವಿಶೇಷವಾಗಿ ಶ್ಲಾಘನೀಯವಾದ ಸಾಂತ್ವನ ಚಟುವಟಿಕೆಗಳು ನಡೆದಿದೆ ಎಂದು ತಿಳಿಸಿದರು. ಅವರು ಸಭೆಯನ್ನು ಉದ್ಘಾಟಿಸಿದರು. ಎಸ್ ಜೆ ಎಂ ಮೂಲಕ ವಿದ್ಯಾರ್ಥಿಗಳಿಗೆ, ಮುಅಲ್ಲಿಮರುಗಳಿಗೆ, ಕಲಿಕೆಗೆ ಸಿಗುವ ಪ್ರಯೋಜನಗಳ ಕುರಿತು ರೇಂಜ್ ಅಧ್ಯಕ್ಷರಾದ ಜಲಾಲುದ್ದೀನ್ ಮದನಿ ಉಳ್ಳಾಲ ಸಭೆಗೆ ಮನವರಿಕೆ ಮಾಡಿದರು. ಅವರು ಸಭೆಯ ಅಧ್ಯಕ್ಷತೆ ವಹಿಸಿದರು.
ಪ್ರಸ್ತುತ ಸಭೆಯಲ್ಲಿ ಕುಟುಂಬ ಸಮೇತ ಪವಿತ್ರ ಹಜ್ ಯಾತ್ರೆ ಹೊರಡುತ್ತಿರುವ ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್ ಮತ್ತು ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷರಾದ ಬಿ ಜಿ ಹನೀಫ್ ಹಾಜಿ ಉಳ್ಳಾಲ ಇವರನ್ನು ಗೌರವಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ ಜಿ ಹನೀಫ್ ಹಾಜಿ ಸಯ್ಯಿದ್ ಮದನಿ ದರ್ಬಾರ್ ಅತ್ಯಂತ ಪವಿತ್ರ ಸ್ಥಳವಾಗಿದ್ದು, ವೈಯಕ್ತಿಕ, ಕೌಟುಂಬಿಕ ಮುಂತಾದ ಹಲವಾರು ಸಮಸ್ಯೆಗಳಿಗೆ ಪರಿಹಾರ ತಾಣ ಎಂದು ಸಾಂದರ್ಭಿಕವಾಗಿ ಹೇಳಿದರು.
ಎಸ್ ಜೆ ಎಂ ಉಳ್ಳಾಲ ರೇಂಜ್ ಮುಫತ್ತಿಶರಾದ ಹುಸೈನ್ ಸಅದಿ ಹೊಸ್ಮಾರ್ ಮಾತನಾಡಿ ಹಜ್ ಯಾತ್ರೆಗೆ ಹೊರಟವರನ್ನು ಬೀಳ್ಕೊಡುವುದು, ಆ ಮೂಲಕ ಅವರೊಂದಿಗೆ ದುಆ ವಸಿಯ್ಯತ್ ಮಾಡುವುದು ಉತ್ತಮ ಸಂಸ್ಕ್ರತಿಯಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸ್ಮಾರ್ಟ್ ಸ್ಕಾಲರ್‌ಶಿಪ್ ಪರೀಕ್ಷೆಗೆ ದ.ಕ ವೆಸ್ಟ್ ಜಿಲ್ಲೆಯಿಂದ ಅತಿ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ ಆಝಾದ್ ನಗರದ ಅನ್ವಾರುಲ್ ಉಲೂಂ ಮದ್ರಸಕ್ಕೆ ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ವತಿಯಿಂದ ಲಭಿಸಿದ ವಿಶೇಷ ಸ್ಮಾರ್ಟ್ ಮದ್ರಸ ಅವಾರ್ಡ್ ಆಝಾದ್ ನಗರ ಮೊಹಲ್ಲಾ ಜಮಾಅತ್ ಅಧ್ಯಕ್ಷರಾದ ಮುಹಮ್ಮದ್ ಫ್ಯಾನ್ಸಿಯವರ ಮೂಲಕ ಹಸ್ತಾಂತರಿಸಲಾಯಿತು.
ಪ್ರಸ್ತುತ ಸಭೆಯಲ್ಲಿ ಉಳ್ಳಾಲ ರೇಂಜ್ ಅಧೀನದ ಮದ್ರಸಗಳ ಮುಖ್ಯೋಪಾಧ್ಯಾಯರು, ಅಧ್ಯಾಪಕರು ಉಪಸ್ಥಿತರಿದ್ದರು.
Comments
Post a Comment