ರಂಝಾನ್ ಕಿಟ್ ವಿತರಣೆ ಹಾಗು ಜಲ್ಸತುಲ್ ವಿದಾ
ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಉಳ್ಳಾಲ ರೇಂಜ್ ನೇತ್ರತ್ವದಲ್ಲಿ ಉಳ್ಳಾಲ ಮುಅಲ್ಲಿಂ ಒಕ್ಕೂಟ ಇದರ ಸಹಯೋಗದೊಂದಿಗೆ ರಂಝಾನ್ ಕಿಟ್ ವಿತರಣೆ ಹಾಗು ಜಲ್ಸತುಲ್ ವಿದಾ ಉಳ್ಳಾಲ ಆಝಾದ್ ನಗರದ ಅನ್ವಾರುಲ್ ಉಲೂಂ ಮದ್ರಸ ಆಡಿಟೋರಿಯಂ ನಲ್ಲಿ ನಡೆಯಿತು.
ಉಳ್ಳಾಲದ ಹಿರಿಯ ವಿದ್ವಾಂಸರಾದ ಅಬೂ ಝಿಯಾದ್ ಮದನಿ ಪಟ್ಟಾಂಬಿ ಉಸ್ತಾದ್ ದುಆ ನೆರವೇರಿಸಿದರು. ಎಸ್ ಜೆ ಎಂ ಉಳ್ಳಾಲ ರೇಂಜ್ ಅಧ್ಯಕ್ಷರಾದ ಜಲಾಲುದ್ದೀನ್ ಮದನಿ ಮಾತನಾಡಿ ಉಳ್ಳಾಲ ವ್ಯಾಪ್ತಿಯ ಮದ್ರಸ ಮಸೀದಿಗಳ ಸುಮಾರು 160 ಕ್ಕೂ ಮಿಕ್ಕ ಉಸ್ತಾದರುಗಳಿಗೆ ಈ ವರ್ಷ ರಂಝಾನ್ ಕಿಟ್ ನೀಡಲಾಗುತ್ತಿದ್ದು, ಇದಕ್ಕೆ ಹಲವು ಉದಾರ ದಾನಿಗಳು ಸಹಾಯ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು. ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ನಿರ್ವಹಣಾ ಸಮಿತಿ ಚೇರ್ಮಾನ್ ಶರೀಫ್ ಸಅದಿ ಕಲ್ಲಾಪು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷರಾದ ಬಿ ಜಿ ಹನೀಫ್ ಹಾಜಿ ಮತ್ತು ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಕಾಮಿಲ್ ಸಖಾಫಿ ಉಳ್ಳಾಲ, ನಿರ್ವಹಣಾ ಸಮಿತಿ ಕೋಶಾಧಿಕಾರಿ ವಿ ಕೆ ಅಬ್ದುರ್ರಹ್ಮಾನ್ ಸಖಾಫಿ ಮುಕ್ಕಚೇರಿ, ಟೃಸ್ಟ್ ಕಾರ್ಯದರ್ಶಿ ಬಶೀರ್ ಸಖಾಫಿ ಉಳ್ಳಾಲ, ಇಬ್ರಾಹಿಂ ಅಹ್ಸನಿ ಮಂಜನಾಡಿ, ಪಿ ಎಸ್ ಮುಹಮ್ಮದ್ ಕಾಮಿಲ್ ಸಖಾಫಿ ಮದನಿ ನಗರ ಶುಭ ಹಾರೈಸಿ ಮಾತನಾಡಿದರು.
ನಿರ್ವಹಣಾ ಸಮಿತಿ ಕನ್ವೀನರ್ ಅಬ್ಬಾಸ್ ಮದನಿ ಬಂಡಾಡಿ ಸ್ವಾಗತಿಸಿದರು. ಅಬೂ ಅನಸ್ ಜಮಾಲುದ್ದೀನ್ ಫುರ್ಖಾನಿ ಧನ್ಯವಾದಗೈದರು.

Comments
Post a Comment