ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ SJM ಉಳ್ಳಾಲ ರೇಂಜ್ ಆಶ್ರಯದಲ್ಲಿ ರೇಂಜ್ ಕಾಂಫರೆನ್ಸ್

ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ SJM ಉಳ್ಳಾಲ ರೇಂಜ್ ಆಶ್ರಯದಲ್ಲಿ ರೇಂಜ್ ಕಾಂಫರೆನ್ಸ್ ಕಲ್ಲಾಪು ಸೇವಂತಿಗುಡ್ಡೆಯ ವಿಖಾಯತುಲ್ ಇಸ್ಲಾಂ ಮದ್ರಸ ಸಭಾ ಭವನದಲ್ಲಿ ನಡೆಯಿತು.

ಮುಕ್ಕಚೇರಿ ಮದ್ರಸದ ಮುಅಲ್ಲಿಂ ಶರೀಫ್ ಬಾಖವಿ ದುಆ ನೆರವೇರಿಸಿದರು. ತೋಟ ಮದ್ರಸ ಮುಅಲ್ಲಿಮರಾದ ಮುಸ್ತಫ ಸಅದಿ ಖಿರಾಅತ್ ಪಠಿಸಿ, ಸಭೆಗೆ ಚಾಲನೆ ನೀಡಿದರು.
ಸೇವಂತಿಗುಡ್ಡೆ ಮಸೀದಿಯ ಇಮಾಮರಾದ ಅಬ್ದುಲ್ ಹಕೀಂ ಮದನಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ರೇಂಜ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ವರದಿಯನ್ನು ಮತ್ತು ಕೋಶಾಧಿಕಾರಿ ವಿ ಎ ಮುಹಮ್ಮದ್ ಸಖಾಫಿ ಲೆಕ್ಕಪತ್ರವನ್ನು ಮಂಡಿಸಿದರು.

ಸೇವಂತಿಗುಡ್ಡೆ ಜಮಾಅತ್ ಅಧ್ಯಕ್ಷರಾದ ಶಮೀರ್ ಸೇವಂತಿಗುಡ್ಡೆ ಮತ್ತು ಮದ್ರಸ ಸಂಚಾಲಕ ಜಾಬಿರ್ ಕಲ್ಲಾಪು ಶುಭ ಹಾರೈಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ತೌಸೀಫ್ ಸೇವಂತಿಗುಡ್ಡೆ, ಸದಸ್ಯರಾದ ಮುಹಮ್ಮದ್, ಫಾರೂಖ್ ಮತ್ತು ಹಿರಿಯ ವ್ಯಕ್ತಿ ಅಬೂಬಕರ್ ಜೆಪ್ಪು ಮತ್ತು ಅರ್ಶದ್, ಆಸಿಫ್ ಕೆರೆಬೈಲು, ನಿಸಾರ್, ಖಲೀಲ್ ಮೇಲಗುಡ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಸಭೆಯ ಪ್ರಾರಂಭಕ್ಕೂ ಮುನ್ನ ಮಾರ್ಗತಲೆ ಮದ್ರಸದ ಸದರ್ ಮುಅಲ್ಲಿಂ ಜಮಾಲ್ ಮದನಿ ವಿದ್ಯಾರ್ಥಿಗಳಿಗೆ ಮಾದರಿಯುಕ್ತ ತರಗತಿ ನಡೆಸಿದರು. 
ಮುಕ್ಕಚೇರಿ ಅಲ್ ಮುಬಾರಕ್ ಮದ್ರಸದ ಸದರ್ ಮುಅಲ್ಲಿಮ್ ವಿ ಕೆ ಅಬ್ದುರ್ರಹ್ಮಾನ್ ಸಖಾಫಿ ಕಿತಾಬ್ ಪರಿಚಯ ಮಾಡಿದರು.

ಅಳೇಕಲ ನಜಾತುಸ್ಸಿಬಿಯಾನ್ ಮದ್ರಸದ ಮುಅಲ್ಲಿಂ ನಿಝಾಂ ಅಮಾನಿ ಅರಬಿ ಭಾಷಾ ದಿನ ಎಂಬ ವಿಷಯದಲ್ಲಿ ಸಮಗ್ರವಾದ ಪ್ರಬಂಧ ಮಂಡಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಯೂನುಸ್ ಇಮ್ದಾದಿ ಅಲ್ ಫುರ್ಖಾನಿ ಎಸ್ ಜೆ ಎಂ ವತಿಯಿಂದ ನಡೆಸಲ್ಪಡುವ ಎಲ್ಲಾ ಕಾರ್ಯ ಚಟುವಟಿಕೆಯಲ್ಲಿ  ರೇಂಜ್ ಮುಅಲ್ಲಿಮರು ಸಕ್ರಿಯರಾಗಬೇಕೆಂದು ತಿಳಿಸಿದರು.

ಸಯ್ಯಿದ್ ಮದನಿ ಅರೆಬಿಕ್ ಎಜ್ಯುಕೇಶನಲ್ ಟ್ರಸ್ಟ್ ಮುಫತ್ತಿಶರಾದ ಹುಸೈನ್ ಸಅದಿ ಹೊಸ್ಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸುಂದರಭಾಗ್ ಮದ್ರಸದ ಸದರ್ ಮುಅಲ್ಲಿಂ ಕೆ ಎಂ ಮುಹ್ಯಿದ್ದೀನ್ ಮದನಿ ಸೇವಂತಿಗುಡ್ಡೆ ಮದ್ರಸದ ಆರಂಭದ ಕಿರು ಚಿತ್ರಣವನ್ನು ಸಭೆಗೆ ತಿಳಿಸಿದರು.
ದಾರಂದಬಾಗಿಲು ತರ್ಬಿಯತುಲ್ ಅನಾಂ ಮದ್ರಸದ ಸದರ್ ಮುಅಲ್ಲಿಂ ಅಬ್ದುಲ್ ರಝ್ಝಾಖ್ ಮದನಿ ವಾರ್ತಾ ವಾಚಿಸಿದರು.

ಕಾರ್ಯಕ್ರಮದಲ್ಲಿ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಕ್ವಿಝ್ ಮಾಸ್ಟರ್ ವಿ ಎ ಮುಹಮ್ಮದ್ ಸಖಾಫಿ ಕ್ವಿಝ್ ಸ್ಪರ್ಧೆ ನಡೆಸಿದರು. ಜಾಬಿರ್ ಫಾಳಿಲಿ ಸ್ಪರ್ಧೆಯಲ್ಲಿ ವಿಜೇತರಾಗಿ ಆಯ್ಕೆಯಾದರು.

ಇರ್ಫಾನ್ ಸಅದಿ ಹಾಗು ಜಾಬಿರ್ ಫಾಳಿಲಿ ಪ್ರವಾದಿ ﷺ ರವರ ಮದ್ಹ್ ಆಲಾಪಿಸಿದರು.
ಪ್ರಸ್ತುತ ಸಭೆಯಲ್ಲಿ ರೇಂಜ್ ಅಧೀನದ ಮದ್ರಸಗಳಲ್ಲಿ  ಹೊಸದಾಗಿ ಸೇವೆ ನೀಡುತ್ತಿರುವ  ಅಧ್ಯಾಪಕರ ಮುಅಲ್ಲಿಮ್ ಸೇವಾ ಕಾರ್ಡನ್ನು ಹಸ್ತಾಂತರಿಸಲಾಯಿತು.

ರೇಂಜ್ ಕಾಂಫರೆನ್ಸ್ ನಡೆಸಲು ಸ್ಥಳ ಸೌಕರ್ಯ ನೀಡಿ, ಮುಂಜಾನೆಯ ಚಹಾ, ತಿಂಡಿ, ವಿವಿಧ ನಮೂನೆಯ ನಾಷ್ಟಗಳು, ಬಗೆ ಬಗೆಯ ಕರಿಗಳು, ಹಣ್ಣು ಹಂಪಲುಗಳು, ಪಾಲ್ಗೊಂಡ ಮುಅಲ್ಲಿಮರೆಲ್ಲರಿಗೂ ಉಡುಗೊರೆಯನ್ನು ನೀಡಿ ವ್ಯಾಪಕ ಪ್ರಶಂಶೆಗೊಳಗಾದ ಸೇವಂತಿಗುಡ್ಡೆ ಮೊಹಲ್ಲಾದ ಆಡಳಿತ ಸಮಿತಿ, ಸಹಕರಿಸಿದ ಊರ ಸಹೋದರರು, ತಾಯಂದಿರು. ಅಲ್ಲಿನ ಅಧ್ಯಾಪಕರುಗಳು ಎಲ್ಲರಿಗೂ ಸಭೆಯಲ್ಲಿ ಪ್ರಾರ್ಥಿಸಲಾಯಿತು.

ರೇಂಜ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಅಬ್ದುರ್ರಝ್ಝಾಖ್ ಮದನಿ ಧನ್ಯವಾಧಗೈದರು.

Comments

Popular posts from this blog

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ( ಎಸ್ ಜೆ ಎಂ ) ದ.ಕ ಜಿಲ್ಲಾ ವೆಸ್ಟ್ ಮಹಾಸಭೆ. ನೂತನ ಪದಾಧಿಕಾರಿಗಳ ಆಯ್ಕೆ

ಸಮಸ್ತ ಸೆಂಟಿನರಿ ಸಂಭ್ರಮದ ಅಂಗವಾಗಿ ನಡೆದ ದ.ಕ.ಜಿಲ್ಲಾ ಮುಅಲ್ಲಿಂ ಸಮ್ಮೇಳನ

ದೇಶ ವಿದೇಶಗಳಲ್ಲಿ ಏಕಕಾಲದಲ್ಲಿ ನಡೆದ ಸ್ಮಾರ್ಟ್ ಸ್ಕಾಲರ್‌ಶಿಪ್ ಮುಖ್ಯ ಪರೀಕ್ಷೆ