ಸ್ಮಾರ್ಟ್ ಸ್ಕಾಲರ್‌ಶಿಪ್ ಮುಖ್ಯ ಪರೀಕ್ಷೆ, ಉಳ್ಳಾಲ, ಮಂಗಳೂರು ಮತ್ತು ಕಾಟಿಪಳ್ಳ ಡಿವಿಷನ್ ಕಾರ್ಯಾಗಾರ


ಸಮಸ್ತ ಕೇರಳ ಸುನ್ನಿ ಶಿಕ್ಷಣ ಮಂಡಳಿಯಿಂದ ಮಾನ್ಯತೆ ಪಡೆದಿರುವ ಮದರಸಾಗಳಲ್ಲಿ 3 ರಿಂದ +2 ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಹೆಚ್ಚುವರಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು, ಮದ್ರಸಾ ಅಧ್ಯಯನದಲ್ಲಿ ಆಸಕ್ತಿ ಹೆಚ್ಚಿಸಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಸಮಸ್ತ ಕೇರಳ ಸುನ್ನಿ ಶಿಕ್ಷಣ ಮಂಡಳಿಯು ನಡೆಸುವ ಎರಡನೇ ಹಂತದ ಸ್ಮಾರ್ಟ್ ಸ್ಕಾಲರ್‌ಶಿಪ್ ಪರೀಕ್ಷೆಯ ಮುಖ್ಯ ಪರೀಕ್ಷೆಯು ನ.29 ರ ಶನಿವಾರ ಬೆಳಿಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ನಡೆಯಲಿದೆ.

ಕೇರಳ, ತಮಿಳುನಾಡು, ಕರ್ನಾಟಕ, ಲಕ್ಷದ್ವೀಪ, ಸೌದಿ ಅರೇಬಿಯಾ, ಬಹ್ರೇನ್, ಕತಾರ್, ಯುಎಇ, ಓಮನ್ ಮತ್ತು ಕುವೈತ್‌ನಲ್ಲಿ 3200 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಒಂದು ಲಕ್ಷದ ಎರಡು ಸಾವಿರದ ಐನೂರು ಆಯ್ದ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ.
ಪರೀಕ್ಷೆಯು ಸಂಪೂರ್ಣವಾಗಿ OMR ತಂತ್ರಜ್ಞಾನವನ್ನು ಬಳಸಿಕೊಂಡು ನಾಗರಿಕ ಸೇವೆಗಳ ಪರೀಕ್ಷೆಯ ಮಾದರಿಯಲ್ಲಿ ರಚನೆಯಾಗಿದೆ.
ಒಬ್ಬ ಮುಖ್ಯ ಪರೀಕ್ಷಕರು ಮತ್ತು 30 ವಿದ್ಯಾರ್ಥಿಗಳಿಗೆ ಒಬ್ಬ ಪರಿವೀಕ್ಷಕರು ಸೇರಿದಂತೆ ವಿಶೇಷ ತರಬೇತಿ ಪಡೆದ 6500 ಶಿಕ್ಷಕರು ಮುಖ್ಯ ಪರೀಕ್ಷೆಯನ್ನು ನಡೆಸುತ್ತಾರೆ ಎಂದು ಕರ್ನಾಟಕ ರಾಜ್ಯ ಎಸ್ ಜೆ ಎಂ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ತಿಳಿಸಿದರು. ಅವರು ಉಳ್ಳಾಲ, ಮಂಗಳೂರು, ಕಾಟಿಪಳ್ಳ ಡಿವಿಷನಿನ ಇನ್ವಿಜಿಲೇಟರುಗಳ ತರಬೇತಿ ಸಭೆಯಲ್ಲಿ ಮುಖ್ಯ ಪರೀಕ್ಷಕರಾಗಿ ವಿಷಯ ಮಂಡನೆ ಮಾಡಿದರು. 

ಉಳ್ಳಾಲ ರೇಂಜಿನ ವಿ ಎ ಮುಹಮ್ಮದ್ ಸಖಾಫಿ ದುಆ ನೆರವೇರಿಸಿದರು. ರಾಜ್ಯ ಎಸ್ ಜೆ ಎಂ ಪ್ರಧಾನ ಕಾರ್ಯದರ್ಶಿ ಪಿ ಎಂ ಮದನಿ ಸಭೆಯನ್ನು ಉದ್ಘಾಟಿಸಿದರು. ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿದರು.
ಪ್ರಸ್ತುತ ಸಭೆಯಲ್ಲಿ ಉಳ್ಳಾಲ, ಮಂಗಳೂರು, ಕಾಟಿಪಳ್ಳ ಡಿವಿಷನಿನ ಇನ್ವಿಜಿಲೇಟರುಗಳು ಭಾಗವಹಿಸಿದರು.

Comments

Popular posts from this blog

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ( ಎಸ್ ಜೆ ಎಂ ) ದ.ಕ ಜಿಲ್ಲಾ ವೆಸ್ಟ್ ಮಹಾಸಭೆ. ನೂತನ ಪದಾಧಿಕಾರಿಗಳ ಆಯ್ಕೆ

ಸಮಸ್ತ ಸೆಂಟಿನರಿ ಸಂಭ್ರಮದ ಅಂಗವಾಗಿ ನಡೆದ ದ.ಕ.ಜಿಲ್ಲಾ ಮುಅಲ್ಲಿಂ ಸಮ್ಮೇಳನ

ದೇಶ ವಿದೇಶಗಳಲ್ಲಿ ಏಕಕಾಲದಲ್ಲಿ ನಡೆದ ಸ್ಮಾರ್ಟ್ ಸ್ಕಾಲರ್‌ಶಿಪ್ ಮುಖ್ಯ ಪರೀಕ್ಷೆ