"ಮುಅಲ್ಲಿಮರ ನಿಸ್ವಾರ್ಥ ಸೇವೆಯಿಂದ ಮಾತ್ರ ಸಮಾಜದ ಉನ್ನತಿ" ಉಜಿರೆ ತಂಙಳ್. ರಾಜ್ಯ ಮಟ್ಟದ ಮುಅಲ್ಲಿಂ ಮೆಹರ್'ಜಾ‌ನ್ಗೆ‌ ಅದ್ದೂರಿಯ ಚಾಲನೆ

ಚಿಕ್ಕಮಗಳೂರು : ಮುಸ್ಲಿಂ ಸಮಾಜದ ಪರಮೋನ್ನತ ಏಳಿಗೆಯಲ್ಲಿ ಮುಅಲ್ಲಿಮರ ಸೇವೆ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ ಎಂದು ಎಸ್.ಎಂ.ಎ ರಾಜ್ಯಾಧ್ಯಕ್ಷರಾದ ಇಸ್ಮಾಯಿಲ್ ಮದನಿ ಉಜಿರೆ ತಂಙಳ್ ರವರು ತಿಳಿಸಿದರು. ಅವರು ಮದ್ರಸಾ ಅಧ್ಯಾಪಕರ ಒಕ್ಕೂಟ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್.ಜೆ.ಎಂ ವತಿಯಿಂದ ಚಿಕ್ಕಮಗಳೂರಿನ ಉಪ್ಪಳ್ಳಿಯ ಶಾದುಲಿ ಜುಮಾ ಮಸ್ಜಿದ್ ವಠಾರದಲ್ಲಿ ಹಮ್ಮಿಕೊಂಡ ರಾಜ್ಯ ಮಟ್ಟದ ಮುಅಲ್ಲಿಂ ಮೆಹರ್'ಜಾನ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಎಸ್.ಜೆ.ಎಂ ರಾಜ್ಯಾಧ್ಯಕ್ಷ ಅಬ್ದುಲ್ ರಹಿಮಾನ್ ಮದನಿ ಜೆಪ್ಪು ರವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಕ್ರಿಯವಾಗಿ ಬೋಧನಾ ರಂಗಕ್ಕಿಳಿದಿರುವ ಮದ್ರಸಾ ಅಧ್ಯಾಪಕರಲ್ಲಿ ನಾಯಕತ್ವ ಗುಣವನ್ನು ಇನ್ನಷ್ಟು ಪೋಷಿಸಲು ಮುಅಲ್ಲಿಂ ಮೆಹರ್ಜಾನ್ ಅತ್ಯಂತ ಸಹಕಾರಿಯಾಗಿದೆ ಎಂದು ತಿಳಿಸಿದರು.

ಮೂರು ಪ್ರಮುಖ ವೇದಿಕೆಗಳಲ್ಲಾಗಿ ಸುಮಾರು 40 ರಷ್ಟು ವೈವಿಧ್ಯಮಯ ಸ್ಪರ್ಧೆಗಳೊಂದಿಗೆ 300 ರಷ್ಟು ಮುಅಲ್ಲಿಮರು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ವೇದಿಕೆಯಾಗಿ ಮುಅಲ್ಲಿಂ ಮೆಹರ್ಜಾನ್ ಹಮ್ಮಿಕೊಳ್ಳಲಾಗಿದೆ.

ಒಂದನೇ ವೇದಿಕೆಗೆ ಮರ್ಹೂಂ ಕಟ್ಟಿಪಾರ ಉಸ್ತಾದ್ ಹೆಸರು  ಎರಡು ಮತ್ತು ಮೂರನೇ ವೇದಿಕೆಗೆ  ಕೆ.ಪಿ ಮಹಮ್ಮದ್  ಮುಸ್ಲಿಯಾರ್   ಹಾಗೂ ಕೆ.ಪಿ ಸುಲೈಮಾನ್ ಹಾಜಿ  ರವರ ಹೆಸರನ್ನು ನೀಡಲಾಗಿದೆ.
ರಾಜ್ಯ ಪ್ರೋಗ್ರಾಮ್ ಸಮಿತಿ ಚೇರ್‌ಮಾನ್ ಹಾಫಿಳ್ ಮುಹಮ್ಮದ್ ಹನೀಫ್ ಮಿಸ್ಬಾಹಿ ಪ್ರಾಸ್ತಾವಿಕ ಭಾಷಣ ನಡೆಸಿದರು. ಯೂಸುಫ್ ಮದನಿ ಬೇಲೂರು, ಕೆ.ಎಂ.ಜೆ ಜಿಲ್ಲಾಧ್ಯಕ್ಷ ಅಹ್ಮದ್ ಝಮೀರ್ ಬಾಳೆಹೊನ್ನೂರು, ಎಸ್.ಎಂ.ಎ ಜಿಲ್ಲಾಧ್ಯಕ್ಷ್ಯ ಅಬೂಬಕರ್ ಸಿದ್ದೀಖ್ ಸಂಗೀನ್, ಯೂಸುಫ್ ಹಾಜಿ ಉಪ್ಪಳ್ಳಿ, ಮುಂತಾದ ಗಣ್ಯರು ಶುಭ ಹಾರೈಸಿ ಮಾತನಾಡಿದರು.

ಸ್ಥಳೀಯ ಮುದರ್ರಿಸ್ ಇಸ್ಮಾಯಿಲ್ ಸಅದಿ ಮಾಚಾರ್ ರವರ ನೇತ್ರತ್ವದಲ್ಲಿ ಮಖಾಂ ಝಿಯಾರತ್ ನಡೆದು, ಬಳಿಕ  ಶಾದುಲಿ ಜುಮಾ ಮಸ್ಜಿದ್ ಅಧ್ಯಕ್ಷ ಉಸ್ಮಾನ್ ಹಂಡುಗುಳಿ ಯವರು ದ್ವಜಾರೋಣ ನೆರವೇರಿಸಿದರು.

ಪ್ರಾರಂಭದಲ್ಲಿ ಪಿ.ಎಂ. ಮುಹಮ್ಮದ್ ಮದನಿ ಸಭೆಯನ್ನು ಸ್ವಾಗತಿಸಿದರು. ರಾಜ್ಯ ಎಸ್.ಜೆ.ಎಂ ಕೋಶಾಧಿಕಾರಿ ಅಬ್ದುಲ್ ರಶೀದ್ ಸಖಾಫಿ ಮಜೂರು, ಎಸ್.ಎಸ್.ಎಫ್ ಮಾಜಿ ರಾಜ್ಯ ಕಾರ್ಯದರ್ಶಿ  ಸಫ್ವಾನ್ ಚಿಕ್ಕಮಂಗಳೂರು, ರಾಜ್ಯ ಮೆಹರ್ಜಾನ್ ಕನ್ವೀನರ್ ಇಸ್ಮಾಯಿಲ್ ಸಅದಿ ಉರುಮಣೆ, ಯಾಕೂಬ್ ಲತ್ವೀಫಿ, ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ,ಮುಹ್ಯದ್ದೀನ್ ಸ‌ಅದಿ ತೋಟಾಲ್‌ ಮುಂತಾದ ರಾಜ್ಯ ನಾಯಕರು ಹಾಗೂ ಉಮರಾ  ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Comments

Popular posts from this blog

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ( ಎಸ್ ಜೆ ಎಂ ) ದ.ಕ ಜಿಲ್ಲಾ ವೆಸ್ಟ್ ಮಹಾಸಭೆ. ನೂತನ ಪದಾಧಿಕಾರಿಗಳ ಆಯ್ಕೆ

ಸಮಸ್ತ ಸೆಂಟಿನರಿ ಸಂಭ್ರಮದ ಅಂಗವಾಗಿ ನಡೆದ ದ.ಕ.ಜಿಲ್ಲಾ ಮುಅಲ್ಲಿಂ ಸಮ್ಮೇಳನ

ದೇಶ ವಿದೇಶಗಳಲ್ಲಿ ಏಕಕಾಲದಲ್ಲಿ ನಡೆದ ಸ್ಮಾರ್ಟ್ ಸ್ಕಾಲರ್‌ಶಿಪ್ ಮುಖ್ಯ ಪರೀಕ್ಷೆ